Mangalore and Udupi news
Blog

ಉಡುಪಿ | ಸರಗಳ್ಳತನ ಆರೋಪಿಗಳ ಬಂಧನ

ಉಡುಪಿ‌. ಅ.1 :- ಅಂಬಲಪಾಡಿಯ ದೇವಸ್ಥಾನದಲ್ಲಿ‌ ನವರಾತ್ರಿಯ ಸಡಗರದಲ್ಲಿ ಜನ‌‌ನಿಬಿಡದಲ್ಲಿ ಮಹಿಳೆಯರಿರ್ವರು ವೃದ್ದ ಮಹಿಳೆಯೋರ್ವರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದು, ಸಂಶಯಗೊಂಡ ವೃದ್ದ ಮಹಿಳೆಯು ಮಹಿಳೆಯರಿಬ್ಬರ ಮೇಲೆ ಸಂಶಯ ಇದೆ ಎಂದು ಹೇಳಿರುತ್ತಾರೆ.

ತದನಂತರ ಮಹಿಳೆಯರನ್ನು ಪರಿಶೀಲಿಸಿದಾಗ ಸರವು ಸಿಕ್ಕಿರುತ್ತದೆ. ಈ ಬಗ್ಗೆ ಕೋಪಗೊಂಡ ಸಾರ್ವಜನಿಕ ಮಹಿಳೆಯರು ಆಪಾದಿತ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದು, ವಿಶುಶೆಟ್ಟಿಯವರು ಮಹಿಳೆಯರನ್ನು ರಕ್ಷಿಸಿರುತ್ತಾರೆ. ಪೆಟ್ಟು ತಿಂದ ಮಹಿಳೆಯರು ಪೋಲಿಸರಿಗೆ ಒಪ್ಪಿಸುವ ಸಂದರ್ಭದಲ್ಲಿ ಅನಾರೋಗ್ಯದ ಮಾತು ಆಡಿದ್ದಾರೆ.

ತದನಂತರ ವಿಶುಶೆಟ್ಟಿಯವರು ಆಪಾದಿತ ಮಹಿಳೆಯರನ್ನು ವಿಜಯಲಕ್ಷ್ಮಿಯವರ ನೆರವಿನೊಂದಿಗೆ ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಆಪಾದಿತ ಮಹಿಳೆಯರು ತಮಿಳುನಾಡು ಮೂಲದವರೆಂಬ ಮಾಹಿತಿ ಇದೆ.

Related posts

Leave a Comment