ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಶಿರೂರು ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ಯುವತಿ ಬೇಬಿ ಕಾಶ್ಪಾ ಎಂದು ತಿಳಿಯಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರ ಹಬಿಬುನ್ಸಿಸಾ ಪ್ರಾಯ 40 ವರ್ಷ ಗಂಡ ಡಾಂಗಿ ಅಬ್ದುಲ್ ಸಮದ್ ಡಾಂಗಿ ಕೆಸರಕೊಡಿ ಶಿರೂರು ಗ್ರಾಮ ಇವರ ಮಗಳು ಬೀಬಿ ಕಾಶ್ಪಾ (18) ಯವರು ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಾಂಗ ಮಾಡಿಕೊಂಡಿದ್ದವಳು. ದಿನಾಂಕ 30/09/2025 ರಂದು ಸಂಜೆ 07:30 ಗಂಟೆಗೆ ಶಿರೂರು ಗ್ರಾಮದ ಕೇಸರಕೊಡಿಯಲ್ಲಿರುವ ತನ್ನ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವಳು ಈ ತನಕ ಮನೆಗೂ ಬಾರದೇ ಸಂಬಂಧಿಕರಮನೆಗೂ ಹೋಗದೇಕಾಣೆಯಾಗಿರುತ್ತಾಳೆ. ಕಾಣೆಯಾದ ಮಹಿಳೆಯ ಚಹರೆ : ಪ್ರಾಯ: 18 ವರ್ಷ 3 ತಿಂಗಳು ಎತ್ತರ: 5 ಅಡಿ 11 ಇಂಚು ಮೈಬಣ್ಣ: ಗೋದಿ ಮೈಬಣ್ಣ ಮೂಖ: ದುಂಡು ಮೂಖ ಮಾತನಾಡುವ ಭಾಷೆ: ಹಿಂದಿ ಇಂಗ್ಲೀಷ ಕನ್ನಡ ಉರ್ದು ನಾಖುಂಧ ,ಚಹರೆ ಗುರುತು: ಎಡಕಣ್ಣು ಕೆಳಭಾಗದಲ್ಲಿ ಸಣ್ನ ಕಪ್ಪು ಮಚ್ಚೆ ಇರುತ್ತದೆ.ಧರಿಸಿರುವ ಬಟ್ಟೆ: ಗ್ರೀನ್ ಕಲರ್ ಟಾಪ್ ಮತ್ತು ಕಾಫಿ ಬಣ್ಣದ ಪ್ಯಾಂಟ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 173/2025 ಕಲಂ 00 MP ಹೆಂಗಸು ಕಾಣೆ ರಂತೆ ಪ್ರಕರಣ ದಾಖಲಿಸಲಾಗಿದೆ.