Mangalore and Udupi news
Blog

ಸುಳ್ಯ: ಟೈಲರ್ ಅಂಗಡಿಯೊಳಗೆ ನುಗ್ಗಿದ ಕಾರು…!!

ಸುಳ್ಯ: ಹೊಸ ಇಕೋ ಕಾರೊಂದು ಸುಳ್ಯದ ಅಕ್ಷಯ್ ಆರ್ಕೇಡ್‌ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಬಗ್ಗೆ ವರದಿಯಾಗಿದೆ.

ಕಾರಿಗೆ ಬೈಕ್ ಅಡ್ಡ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಕಾರು ಅಂಗಡಿಯೊಳಗೆ ನುಗ್ಗಿರುವ ರಭಸಕ್ಕೆ ಟೈಲರ್ ಮೆಷಿನ್ ಸೇರಿದಂತೆ ಬಟ್ಟೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಅದೃಷ್ಟವಶಾತ್ ಮಧ್ಯಾಹ್ನ ಊಟದ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇರಲಿಲ್ಲ. ಸ್ಥಳಕ್ಕೆ ನೂರಾರು ಜನ ಜಮಾಯಿಸಿದ್ದರು.

Related posts

Leave a Comment