Mangalore and Udupi news
Blog

ಟ್ರೇಡಿಂಗ್ ಆ್ಯಪ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ….!!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ವ್ಯಕ್ತಿಯೊಬ್ಬರಿಗೆ ಟ್ರೇಡಿಂಗ್ ಆ್ಯಪ್ ನಲ್ಲಿ ಲಾಭ ಬರುತ್ತದೆ ಎಂದು ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ನಡೆದಿದೆ.

ಉಮೇಶ್ ಎಂಬವರಿಗೆ ಟ್ರೇಡಿಂಗ್ ಆ್ಯಪ್ ನಲ್ಲಿ ಲಕ್ಷಾಂತರ ರೂಪಾಯಿ ವಂಚನೆಯಾಗಿ ಎಂದು ತಿಳಿದು ಬಂದಿದೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಉಮೇಶ ಇವರಿಗೆ ದಿನಾಂಕ 06/05/2025 ರಂದು ಮಧ್ಯಾಹ್ನ 3:30 ಗಂಟೆಗೆ ಪಿರ್ಯಾದಿದಾರರ ಮೊಬೈಲ್‌ ಗೆ ಕಾಲ್‌ ಮಾಡಿ ಅವರು ಪಿರ್ಯಾದಿದಾರರಿಗೆ ತುಂಬಾ ಲಾಭ ಬರುವ ಟ್ರೇಡಿಂಗ್ ಆಫ್‌ ಇರುವುದಾಗಿ ತಿಳಿಸಿ ಹಣ ಹಾಕಿದ್ದಲ್ಲಿ ಉತ್ತಮ ಲಾಭಾಂಶ ಬರುತ್ತದೆ ಎಂದು ಪಿರ್ಯಾದಿದಾರರಿಗೆ ನಂಬಿಕೆ ಹುಟ್ಟಿಸಿ Finadex ಆಪ್‌ನಲಿ ಹಣ ಹೂಡಲು ಹೇಳಿದ್ದು ಅದರಂತೆ ಪಿರ್ಯಾದಿದಾರರು ಮೊದಲು ಆರೋಪಿತರು ಕಳುಹಿಸಿದ Sandix Trading PVT. LTDನ ಪೋನ್‌ ಪೇ ಲಿಂಕ್‌ಗೆ 21,600/- ರೂಪಾಯಿ ಹಣವನ್ನು ಪಿರ್ಯಾದಿದಾರರ ಪೋನ್‌ ಪೇ ಮೂಲಕ ಹಾಕಿರುತ್ತಾರೆ. ಎರಡು ದಿನದ ನಂತರ ಪಿರ್ಯಾದಿದಾರರಿಗೆ ಪೋನ್‌ ಮಾಡಿ ನಿಮ್ಮ ಲಾಭದ ಹಣ ಪಡೆದುಕೊಳ್ಳಿ ಎಂದು ಹೇಳಿದಕ್ಕೆ ಆಫ್‌ನಲ್ಲಿ ಪಿರ್ಯಾದಿದಾರರ ಅಕೌಂಟ್‌ ನಂಬರ್‌ ಹಾಕಿರುತ್ತಾರೆ. ಅದಕ್ಕೆ 2,130/- ರೂಪಾಯಿ ಲಾಭದ ಹಣ ಬಂದಿರುತ್ತದೆ. ಹಣವನ್ನು ಪಿರ್ಯಾದಿದಾರರ ಅಕೌಂಟ್‌ಗೆ ಹಾಕಿರುತ್ತಾರೆ. ನಂತರ ಪುನ: ಹಣ ಹಾಕಲು ಹೇಳಿದ್ದು ಆರೊಪಿತರು ಪಿರ್ಯಾದಿದಾರರಿಗೆ ಸ್ವಲ್ಪ ಹಣ ಹಾಕಿ ಆಶೆ ಹುಟ್ಟಿಸಿ ಹಾಗೂ ಜಾಸ್ತಿ ಲಾಭದ ಹಣ ಮಧ್ಯದಲ್ಲಿ ಬೇಕಾದರೆ ನೀವು ಅಫ್‌ನಲ್ಲಿ ಡಾಲರ್‌ ಮೂಲಕ ನಮೂದಿಸಲು ಹೇಳಿರುತ್ತಾರೆ.

ಪಿರ್ಯಾದಿದಾರರು 2,71,771/- ಹಣವನ್ನು ಟ್ರೇಡಿಂಗ್‌ ಆಫ್‌ನಲ್ಲಿ ಹಾಕಿದ್ದು ನಂತರ ಪೋನ್‌ ಮಾಡಿ ಇನ್ನೂ ಜಾಸ್ತಿ ಹಣ ಹಾಕಿ ಒಳ್ಳೆಯ ಲಾಭ ಕೊಡುವುದಾಗಿ ಹೇಳಿರುತ್ತಾ.ರೆ ಪಿರ್ಯಾದಿದಾರರು ಅನುಮಾನ ಗೊಂಡ ಈ ಹಣ ಲಾಭ ಮೊದಲು ಕೊಡಿ ಎಂದು ಹೇಳಿದಾಗ ಅವರು ಟ್ರೇಡಿಂಗ್‌ ಆಫ್‌ನಲ್ಲಿ ಪಿರ್ಯಾದಿದಾರರ ಟ್ರೇಡಿಂಗ್‌ ಮೊತ್ತದ ಹಣವನ್ನು ಒಂದೇ ದಿನದಲ್ಲಿ ನಷ್ಟವಾದ ರೀತಿಯಲ್ಲಿ ತೋರಿಸಿರುತ್ತಾರೆ. ಈ ಬಗ್ಗೆ ಪುನ: ಕಾಲ್‌ ಮಾಡಿ ಪಿರ್ಯಾದದಾರರು ಕೇಳಿದ್ದಲ್ಲಿ ಇನ್ನೂ ಜಾಸ್ತಿ ಟ್ರೇಡಿಂಗ್‌ ಮಾಡಿ ಎಂದು ಹೇಳಿರುತ್ತಾರೆ. ಪಿರ್ಯದಿದಾರರು ಅನುಮಾನಗೊಂಡು ಟ್ರೇಡಿಂಗ್‌ ಮಾಡಿರುವುದಿಲ್ಲ ನಂತರ ಅರೋಪಿತರು ಈ ಹಿಂದೆ ಕರೆ ಮಾಡಿದ ಮೊಬೈಲ್‌ ಹಾಗೂ ಈ ಮೇಲ್‌ ಐಡಿಯನ್ನು ಬಂದ್‌ ಮಾಡಿರುತ್ತಾರೆ.

ಪಿರ್ಯಾದಿದಾರರಿಗೆ ಲಾಭದ ಆಸೆ ತೋರಿಸಿ ಲಾನ್‌ ಲೈನ್‌ ಟ್ರೇಡಿಂಗ್‌ ಮಾಡಲು ಹೇಳಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2025 ಕಲಂ: 318 (4) BNS ಮತ್ತು ಕಲಂ: 66(C),66(D)IT Act ರಂತೆ ಪ್ರಕರಣ ದಾಖಲಾಗಿರುತ್ತದೆ

Related posts

Leave a Comment