Mangalore and Udupi news
Blog

ಭಟ್ಕಳ : ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ. ವಂಚನೆ…!!

ಭಟ್ಕಳ: ನಗರದ ಸ್ಥಳೀಯ ವ್ಯಾಪಾರಿ ಮಹಮದ್ ಶಬೀ ಅವರಿಂದ ಸುಮಾರು 21 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪ ಭಟ್ಕಳದ ನಿವಾಸಿ ಆಸಿಪ್ ಇಕ್ಬಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.ಸೂತ್ರಗಳ ಪ್ರಕಾರ, ಭಟ್ಕಳದ ಸುಲ್ತಾನ್ ಸ್ಟ್ರೀಟ್ ಪ್ರದೇಶದ ನಿವಾಸಿ ಮಹಮದ್ ಶಬೀ ಅವರಿಗೆ, ಬಂದರು ರಸ್ತೆ ಭಾಗದ ಆಸಿಪ್ ಇಕ್ಬಾಲ್ ಅವರ ಪರಿಚಯವಿತ್ತು. ವ್ಯವಹಾರದ ವೇಳೆ ಆಸಿಪ್ ಇಕ್ಬಾಲ್ ಅವರು ತಮ್ಮ ಹೆಸರಿನಲ್ಲಿ “ಮೆಟ್ರೋ ಇನ್‌ಪೋಟೆಕ್ ಪ್ರೈವೇಟ್ ಲಿಮಿಟೆಡ್” ಕಂಪನಿಯ ಟೆಂಡರ್ ದೊರೆತಿದೆ ಎಂದು ಹೇಳಿ, ನಕಲಿ ದಾಖಲೆಗಳನ್ನು ತೋರಿಸಿ ವಿಶ್ವಾಸ ಗಳಿಸಿದ್ದರೆಂದು ತಿಳಿದುಬಂದಿದೆ.

ಅವರು “ಪ್ರಾಜೆಕ್ಟ್ ಆರಂಭವಾದ ನಂತರ ಮೂರು ಪಟ್ಟು ಲಾಭ ಸಿಗುತ್ತದೆ” ಎಂದು ಭರವಸೆ ನೀಡಿ, ಪ್ರಾರಂಭದಲ್ಲಿ 5 ಲಕ್ಷ ರೂಪಾಯಿ ಪಡೆದುಕೊಂಡರು. ಬಳಿಕ ರೈಲು ನಿಲ್ದಾಣದ ಬಳಿ ಭೇಟಿ ಮಾಡಿ ಮತ್ತಷ್ಟು 13 ಲಕ್ಷ ರೂಪಾಯಿ ಸ್ವೀಕರಿಸಿದರೆಂದು ಶಬೀ ಆರೋಪಿಸಿದ್ದಾರೆ.ನಂತರ ಮೊಬೈಲ್ ಟ್ರಾನ್ಸ್ಫರ್ ಮೂಲಕ ಉಳಿದ ಹಣವನ್ನು ಪಡೆದಿದ್ದಾರೆ.

ಆದರೆ ಬಳಿಕ ಹಣವನ್ನು ಹಿಂತಿರುಗಿಸದೇ ಸಂಪರ್ಕ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ, ಮಹಮದ್ ಶಬೀ ಅವರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Related posts

Leave a Comment