Mangalore and Udupi news
Blog

ಮಲ್ಪೆ : ಯುವಕನೋರ್ವ ಕುತ್ತಿಗೆಗೆ ನೇತು ಬಿಗಿದು ಆತ್ಮಹತ್ಯೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಯುವಕನೋರ್ವ ‌ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಒರಿಸ್ಸಾ ನಿವಾಸಿ‌ ಸುಧಾಮ್ ಸಾಹು ಎಂದು ತಿಳಿದು ಬಂದಿದೆ.

ಈ ಘಟನೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಜೀತು ಸಾಹು (35),ಒರಿಸ್ಸಾ ರಾಜ್ಯ, ಹಾಲಿವಾಸ; ಬಡಾನಿಡಿಯೂರು ಗ್ರಾಮ, ಉಡುಪಿ ಇವರ ಅಣ್ಣ ಸುಧಾಮ್‌ ಕಳೆದ 5 ವರ್ಷಗಳಿಂದ ಕದಿಕೆಯಲ್ಲಿರುವ ಪುರಂದರ ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈಗ ಎರಡು ದಿನಗಳಿಂದ ಅಣ್ಣ ಸುಧಾಮ್‌ ಸಾಹು(37) ವಿಪರೀತ ಕುಡಿದುಕೊಂಡು ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸುತ್ತಿದ್ದನು ಎಂದು ಪಿರ್ಯಾದಿದಾರರ ಅತ್ತಿಗೆ ತಿಳಿಸಿರುತ್ತಾರೆ. ದಿನಾಂಕ 20/08/2025 ರಂದು ಬೆಳಿಗ್ಗೆ ಪಿರ್ಯಾದಿದಾರರ ಅಣ್ಣ ಸುಧಾಮ್‌ ಸಾಹು ಎಂದಿನಂತೆ ವಿಪರೀತ ಕುಡಿದುಕೊಂಡು ಬಂದು ಮದ್ಯಾಹ್ನ 2.00 ಗಂಟೆಗೆ ಮಾನಸಿಕ ಅಸ್ಥಸ್ಥನಂತೆ ವರ್ತಿಸುತ್ತಿದ್ದು, ಮನೆಯ ಒಳಗೆ ಹೋಗಿದ್ದು, ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರ ಅತ್ತಿಗೆ ಕಿಟಕಿಯ ಮೂಲಕ ನೋಡಲಾಗಿ ಮನೆಯ ಮಾಡಿನ ಕಬ್ಬಿಣದ ಪಟ್ಟಿಗೆ ಶಾಲ್‌ ಕಟ್ಟಿ ಅದರಿಂದ ಕುತ್ತಿಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದುದಾಗಿ ಮದ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರ ಅಣ್ಣನ ಮಗಳು ಫಾಯಲ್‌ ಪೋನ್‌ ಮಾಡಿ, ತಿಳಿಸಿದಂತೆ ಹೋಗಿ ನೋಡಲಾಗಿ ಸುಧಾಮ್‌ ಸಾಹು ಮಾಡಿನ ಕಬ್ಬಿಣದ ಪಟ್ಟಿಗೆ ಶಾಲ್‌ ಕಟ್ಟಿ ಅದರಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದುದನ್ನು ಕಂಡು, ಪಿರ್ಯಾದಿದಾರರ ಹಾಗೂ ನೆರೆಮನೆಯವರು ಇಳಿಸಿ ನೆಲದಲ್ಲಿ ಮಲಗಿಸಿ ನೋಡಲಾಗಿ, ಅದಾಗಲೇ ಮೃತಪಟ್ಟಿರುವುದು ಕಂಡುಬಂದಿರುತ್ತದೆ.

Related posts

Leave a Comment