Mangalore and Udupi news
Blog

ವಿಟ್ಲ : ಜಾಗದ ತಕರಾರು : ಕತ್ತಿಯಿಂದ ಹಲ್ಲೆ : ಮಹಿಳೆ ಗಂಭೀರ : ಆರೋಪಿ ಪೊಲೀಸ್ ವಶಕ್ಕೆ…!!

ವಿಟ್ಲ: ಜಾಗದ ವಿವಾದ ತಾರಕಕ್ಕೇರಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಆಕೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣಕ್ಕೆ ಸಂಭಂದಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮಹಮ್ಮದ್‌ ಅಶ್ರಫ್‌ (32) ಎಂದು ಗುರುತಿಸಲಾಗಿದೆ

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ನಿವಾಸಿ ಹಸೀನಾ (23) ಗಂಭೀರ ಗಾಯಗೊಂಡವರು.

ತಾಳಿತ್ತನೂಜಿ ನಿವಾಸಿ ಸುಲೈಮಾನ್‌ ಅವರ ಪ್ರಥಮ ಪತ್ನಿಯ ಪುತ್ರ ಮಹಮ್ಮದ್‌ ಅವರ ಪುತ್ರಿ ಹಸೀನಾ ಮೇಲೆ ದ್ವಿತೀಯ ಪತ್ನಿಯ ಪುತ್ರ ಮಹಮ್ಮದ್‌ ಅಶ್ರಫ್‌ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.

ಮಹಿಳೆಯ ಕುತ್ತಿಗೆಗೆ ಕತ್ತಿ ಬೀಸುವ ಸಂದರ್ಭ ಕೈ ಅಡ್ಡ ತಂದಿದ್ದು, ಬೆರಳಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ವಿಟ್ಲ ಪೊಲೀಸ್‌ ಠಾಣೆಯ ಉಪನಿರೀಕ್ಷಕ ರತ್ನಾಕರ ಹಾಗೂ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Related posts

Leave a Comment