ಶಿವಮೊಗ್ಗ: ಸೊರಬ ತಾಲೂಕಿನ ಗ್ರಾಮವೊಂದರಲ್ಲಿ ಅಂಗನವಾಡಿಯಲ್ಲಿ ಸಹಪಾಠಿ ಜೊತೆ ಜಗಳವಾಡಿ ಕಚ್ಚಿದ ಬಾಲಕನಿಗೆ ಅಂಗನವಾಡಿ ಸಹಾಯಕಿ ಬರೆ ಹಾಕಿರುವ ಘಟನೆ ವರದಿಯಾಗಿದೆ.ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರೂವರೆ ವರ್ಷದ ಮಗನಿಗೆ ಬರೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಗುರುವಾರ ಬಾಲಕ ಎಂದಿನಂತೆ ಅಂಗನವಾಡಿಗೆ ಬಂದಿದ್ದಾನೆ. ಈ ಸಂದರ್ಭ ಬಾಲಕ ತನ್ನ ಸಹಪಾಠಿಯೊಂದಿಗೆ ಜಗಳಮಾಡಿಕೊಂಡು ಆತನಿಗೆ ಕಚ್ಚಿದ್ದಾನೆ. ಇದರಿಂದ ಕೋಪಗೊಂಡ ಅಂಗನವಾಡಿ ಸಹಾಯಕಿ ಬೆಂಕಿಯಲ್ಲಿ ಚಾಕು ಕಾಯಿಸಿ, ಬಾಲಕನ ಎರಡು ಗಲ್ಲಕ್ಕೆ ಬರೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಬಾಲಕನ ಎರಡು ಗಲ್ಲ ಸುಟ್ಟು ಗಾಯಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.ಬಾಲಕ ಮನೆಗೆ ಬಂದಾಗ ಪೋಷಕರಿಗೆ ವಿಷಯ ತಿಳಿದು ಬಂದಿದ್ದು ಪೋಷಕರು ಅಂಗನವಾಡಿಗೆ ಹೋದಾಗ ಅಂಗನವಾಡಿ ಸಹಾಯಕಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

