ಈ ಸಂಸ್ಥೆಯು ತನ್ನ ಅಲ್ಪ ಸಮಯದಲ್ಲಿ *”ಸೇವೆಯ ಕಬಂಧ ಬಾಹು”* ಗಳನ್ನು ಸಮಾಜದಲ್ಲಿ ಮಿಂಚಿನಂತೆ ಪಸರಿಸಲು ಇದರ ಕಾರ್ಯಕರ್ತರ ಶ್ರಮ ಪ್ರಮುಖ ಕಾರಣ.. *ಪಾದರಸದಂತೆ* ಕಾರ್ಯ ನಿರ್ವಹಿಸುವ ಬಲಿಷ್ಟ ಯುವಕರ ಬಳಗ ಸೇವಾ ಬ್ರಿಗೇಡ್ ಎಡಪದವು ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದರು.
ಸಂಸ್ಥೆ 7 ವರುಷದ ಸುದೀರ್ಘ ಸೇವಾ ಪಯಣದಲ್ಲಿ *84* ಮಾಸಿಕ ಸೇವಾ ಯೋಜನೆಯೊಂದಿಗೆ *30* ತುರ್ತು ಯೋಜನೆ ಮೂಲಕ ಸಮಾಜದಿಂದ ಒಟ್ಟು ಮಾಡಿದ
*₹68,00,000 ಸೇವಾಧನವನ್ನು *197 ಕುಟುಂಬ* ದ ಅಶಕ್ತರಿಗೆ ನೆರವಾಗಿದೆ.
‘ಸೇವಾಹಿ ಪರಮೋ ಧರ್ಮಃ’ ಎಂದು ಹೇಳುವ ಮಾತು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ. ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ. ಸೇವಾ ಕೈಂಕರ್ಯ ನೆರವೇರಿಸಲು ಸಂಪತ್ತು, ಮನಸ್ಸು ಮತ್ತು ಅಧಿಕಾರ ಬೇಕಾಗುತ್ತದೆ. ತಮ್ಮಲ್ಲಿರುವ ಸಂಪತ್ತನ್ನು ಬಳಸಿಕೊಂಡು ಉತ್ತಮ ಮನಸ್ಸಿನಿಂದ ಸಮಾಜ ಸೇವೆ ಮಾಡುತ್ತೇನೆಂಬ ಅಧಿಕಾರದಿಂದ ಸೇವೆಗೈದಾಗ ಭಗವಂತನಿಗೆ ತೃಪ್ತಿಯಾಗುತ್ತದೆ..
ನಮ್ಮ ಸಂಸ್ಥೆ ಏಳು ವರ್ಷ ಪೂರೈಸಿದರು, ಕಂಡ ಕನಸು ಕೂಡ ಈ ಮೇಲಿನ ಮಾತಿನಂತೆ..ಹೌದು ‘ಸೇವಾಹಿ ಪರಮೋ ಧರ್ಮಃ’ ಸೇವೆ ಎಂಬ ಮಾತಿನಂತೆ, ಇಲ್ಲಿಯವರೆಗೆ ಸ್ವಾರ್ಥರಹಿತ ರಿಂದ ಮಾಡಿದ ಸೇವೆ ಸಾಕಷ್ಟು ಬಡವರ ಕತ್ತಲ ಜೀವನಕ್ಕೆ ಬೆಳಕಾಗಿದೆ ಎಂಬುದನ್ನ ಹೆಮ್ಮೆಯಿಂದ ಹೇಳಬಲ್ಲೆವು.. ಸೇವಾ ಬ್ರಿಗೇಡ್ ಒಬ್ಬರ ಸೊತ್ತಲ್ಲ..ಅದು ಪ್ರತಿ ಸದಸ್ಯನ ಹೆಮ್ಮೆ…ಅಲ್ಲಿ ಅಭಿಪ್ರಾಯ ತಿಳಿಸಲು ಪ್ರತಿಯೊಬ್ಬರಿಗೂ ಅಧಿಕಾರವಿದೆ..ಎಲ್ಲರಿಗೂ ಸಮಾನ ಗೌರವ ಕೊಡುವಂತಹ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ.
ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಸೇವೆ ಉದ್ದೇಶವಿಲ್ಲದೆ ಸೇವೆಗಳೂ ಆದರಣೀಯವಾಗಬಲ್ಲವು. ಅವಕಾಶ ಸಿಕ್ಕಾಗ ಅಗತ್ಯ ಉಳ್ಳವರಿಗೆ ಮಾಡುವ ಪ್ರತಿಯೊಂದು ಸಣ್ಣ ಅಥವಾ ದೊಡ್ಡ ಉಪಕಾರವೂ ಸೇವೆಯಾಗಬಲ್ಲವು. ಸಮಾಜ ಪರಸ್ಪರರಿಗಾಗಿ ಬದುಕಬೇಕು. ಇನ್ನೊಬ್ಬರ ಕಷ್ಟದಲ್ಲಿ ಕರಗುವ ಅಂತಃಕರಣವಾಗಬೇಕು. ಮಾನವೀಯತೆಯು ಮೆರೆಯಬೇಕು. ಸೇವೆ ಸ್ವಾರ್ಥರಹಿತವಾಗಿರಬೇಕು ಇದರಿಂದ ಸಂಸ್ಥೆಯ ನಿಸ್ವಾರ್ಥ ಸೇವೆಯ ಫಲ ಎಲ್ಲಾರಿಗೂ ಸಿಗುವಂತಾಗಲಿ ಸೇವಾ ಕಾರ್ಯ ಮುಂದುವರೆಯಲಿ.