ಮಂಗಳೂರು: ಪಣಂಬೂರು ಕಡಲ ಕಿನಾರೆಯಲ್ಲಿ ಸುಮಾರು 25-30 ವರ್ಷ ಪ್ರಾಯದ ಅಪರಿಚಿತ ಯುವಕನ ಶವ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಸುಮಾರು 5.5 ಅಡಿ ಎತ್ತರ, ಕಾಫಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದು, ದೇಹದಲ್ಲಿ ಇತರ ಬಟ್ಟೆ ಇಲ್ಲ. ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈ ಬಣ್ಣ, ಕಿವಿಯಲ್ಲಿ ಚಿನ್ನದಂತೆ ತೋರುವ ರಿಂಗ್ ಇದೆ. ಬಲಕೈಯಲ್ಲಿ ಸ್ಟೀಲ್ ಬಳೆಯಿದ್ದು, ಎಂ.ಎಸ್. ಎಂದು ಹಚ್ಚೆ ಹಾಕಲಾಗಿದೆ. ಎಡ ಕೈಯಲ್ಲಿ ಹಾರ್ಟ್ ಹಚ್ಚೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಚಹರೆಯ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.