ಸುಳ್ಯ : ಲಾರಿಗಳಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವ ಕುರಿತು ಆಗಸ್ಟ್ 24ರಂದು ಬೆಳಿಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು*
ಮುರೂರು ಕಡೆಯಿಂದ ಸುಳ್ಯದ ಮೂಲಕ ಮಡಿಕೇರಿ ಮಾರ್ಗಕ್ಕೆ ತೆರಳುತ್ತಿರುವ ಈ ಲಾರಿಗಳನ್ನು ಠಾಣಾ ಉಪನಿರೀಕ್ಷಕರ ನೇತೃತ್ವದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಬಳಿಯಲ್ಲಿ ತಡೆದು ಪರಿಶೀಲಿಸಲಾಯಿತು. ಯಾವುದೇ ಅನುಮತಿ ಇಲ್ಲದೆ ಕೆಂಪು ಕಲ್ಲನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ನಾಲ್ಕೂ ಲಾರಿಗಳು, ಒಟ್ಟು 1750 ಕಲ್ಲುಗಳನ್ನು ಪೊಲೀಸರು ಸ್ವಾಧೀನಗೊಂಡು ಚಾಲಕರು ಮತ್ತು ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.