Mangalore and Udupi news
Blog

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್

ಪಡುಬಿದ್ರಿ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಸ್ತೆ , ಕಾಂಕ್ರೀಟ್ ಕಟ್ಟಡ ನಿರ್ಮಾಣದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಗುಡ್ಡ ಕುಸಿತ ಮತ್ತು ಪ್ರಕೃತಿ ವಿಕೋಪಗಳು ಸಂಭವಿಸುತ್ತಿದ್ದು, ಇದ್ದರಿಂದ ಅತಂಕದ ವಾತವರಣ ಸೃಷ್ಟಿಯಾಗುತಿದೆ. ಇದಕ್ಕೆ ಪರ್ಯಾಯಾವಾಗಿ ಗಿಡ ನೆಟ್ಟು ವರ್ಷಪೂರ್ತಿ ಸಂರಕ್ಷಿಸಿ ಕೂಂಡು ಬರುವುದು. ನಾವು ನೆಟ್ಟ ಗಿಡ ಭವಿಷ್ಯತ್ತಿನಲ್ಲಿ ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಗಾಳಿ ,ಅಹಾರ ಪೂರೈಸುವಂತಿರ ಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾಪು ತಹಶಿಲ್ದಾರ್ ಡಾ, ಪ್ರತಿಭಾ ಆರ್ ಹೇಳಿದರು.

ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಹಸಿರು ಸೇನೆ ಹೆಜಮಾಡಿ ಹಾಗೂ ಪಡುಬಿದ್ರಿ ಪೊಲೀಸ್ ಠಾಣೆ ವತಿಯಿಂದ ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಹಾಗೂ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿದಿನ ಗಿಡಮರಗಳೂಂದಿಗೆ ಹೆಜ್ಜೆ ಹಾಕಬೇಕು ಮರಗಳಿಲ್ಲದೆ ನಮ್ಮ ಜೀವನ ಅಸಾಧ್ಯ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ನೀಡಲು ಮರಗಳನ್ನು ಸಂರಕ್ಷಿಸುವುದು ಅಗತ್ಯ ಎಂದು ಪಡುಬಿದ್ರಿ ಪೋಲಿಸ್ ಠಾಣಾ ಪಿಎಸ್ ಐ ಶಕ್ತಿವೇಲು ಹೇಳಿದ್ದಾರೆ.
ಹೆಜಮಾಡಿ ಹಸಿರು ಸೇನೆ ಸಂಚಾಲಕ ಶೇಖರ್ ಹೆಜ್ಮಾಡಿ ಪ್ರಸ್ತಾವಿಕವಾಗಿ ಮಾತನಾಡಿದರು.
ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದರು.
ಪ್ರಾಂಶುಪಾಲರಾಗಿ ಪದನ್ನೋತಿ ಹೊಂದಿದ ಡಾ. ವಿನ್ಸೆಂಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅಡಳಿತ ಮೋಕ್ತೆಸರ ದಯಾನಂದ ಹೆಜ್ಮಾಡಿ , ಶಾಲಾ ಮುಖ್ಯೋಪಾಧ್ಯಾಯಿನಿ ಸಂಪಾವತಿ, ಹಸಿರು ಸೇನ ಕಾರ್ಯದರ್ಶಿ ಕೇಶವ ಸಾಲ್ಯಾನ್ , ರೋಟರಿ ಸದಸ್ಯರಾದ, ಗಣೇಶ್ ಅಚಾರ್ಯ ಎರ್ಮಾಳ್, ಗೀತಾ ಅರುಣ್ , ಹೇಮಲತಾ ಸುವರ್ಣ, ಶೋಭಾ ಚಂದ್ರಶೇಖರ್ , ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು
ಸುನಿಲ್ ಕುಮಾರ್ ಸ್ವಾಗತಿಸಿ , ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿ , ಸಂತೋಷ್ ಪಡುಬಿದ್ರಿ ನಿರೂಪಿಸಿದರು.

Related posts

Leave a Comment