Mangalore and Udupi news
Blog

ಉಡುಪಿ : ಚಿನ್ನದ ಅಂಗಡಿ ಕಳ್ಳತನ ಪ್ರಕರಣ : ಅಂತರ್‌ ರಾಜ್ಯ 5 ಮಂದಿ ಆರೋಪಿಗಳ ಬಂಧನ…!!

ಉಡುಪಿ : ನಗರದ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಶಂಭು ತನಾಜಿ ಸಾಥೆ, ಪ್ರವೀಣ್ ಅಪ್ಪ ಸಾಥೆ, ನಿಲೇಶ್ ಬಾಪು ಕಸ್ತೂರಿ, ಸಾಗರ್, ಬಾಗವ ರೋಹಿತ್ ಎಂದು ತಿಳಿಯಲಾಗಿದೆ.

ಬಂಧಿತ ಆರೋಪಿಗಳನ್ನು ವಿಚಾರಣೆ ಸನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : ದಿನಾಂಕ 08/09/2025 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದು ವೈಭವ್‌ ಮೋಹನ ಘಾಟಗೆ, ವಾದಿರಾಜ ಮಾರ್ಗ, ಉಡುಪಿ ಜಿಲ್ಲೆ ಇವರು ಅಂಗಡಿಯನ್ನು ಮುಚ್ಚಿ ಶಟರ್‌ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 09/09/2025 ರಂದು ಬೆಳಿಗ್ಗೆ 07:00 ಗಂಟೆಗೆ ಫಿರ್ಯಾದುದಾರರು ಅಂಗಡಿಗೆ ಬಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಶಟರ್‌ ನ ಬಾಗಿಲಿನ ಬೀಗವನ್ನು ಯಾವುದೋ ಕೀ ಯನ್ನು ಉಪಯೋಗಿಸಿ ತೆಗೆದು ದಿನಾಂಕ 08/09/2025 ರಂದು ರಾತ್ರಿ ರಿಫೈನರಿ ಮಷಿನ್‌ ನಲ್ಲಿ ಇಟ್ಟಿದ್ದ ಸುಮಾರು 95,71,000/- ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆ ಅಪರಾಧ ಕ್ರಮಾಂಕ : 168/2025 U/s. 331(4), 331(3), 305 BNS ರಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌ ವಿ.ಬಡಿಗೇರ. ನೇತೃತ್ವದಲ್ಲಿ ಪಿಎಸ್‌ಐ ಭರತೇಶ ಕಂಕಣವಾಡಿ, ಕಾಫು ಠಾಣಾ ಪಿಎಸ್‌ಐ ತೇಜಸ್ವಿ ಟಿ.ಐ ಕೊಲ್ಲೂರು ಠಾಣಾ ಪಿಎಸ್‌ಐ ವಿನಯಕುಮಾರ್‌ ಕೆ. ಸಿಬ್ಬಂದಿಯವರಾದ ಹರೀಶ್‌ ಎಎಸ್‌ಐ, ಜೀವನ್‌ ಕುಮಾರ್‌, ಪ್ರಸನ್ನ ಕುಮಾರ್‌, ಸಂತೋಷ್‌ ಶೆಟ್ಟಿ, ಸಂತೋಷ್‌ ರಾಥೋಡ್‌, ಶಿವಕುಮಾರ್, ಹೇಮಂತ್‌ಕುಮಾರ್‌ ಎಂ.ಆರ್, ಸುನೀಲ್‌ ರಾಥೋಡ್‌, ಮಣಿಪಾಲ್‌ ಠಾಣಾ ರವಿರಾಜ್‌ ಕೊಲ್ಲೂರು ಠಾಣೆ ನಾಗೇಂದ್ರ ಹಾಗೂ ಮಹಾರಾಷ್ಟ್ರರಾಜ್ಯದ ಅಕ್ಲುಜ್‌ ಪೋಲೀಸ್‌ ಠಾಣಾ ಸಿಬ್ಬಂದಿಯವರಾದ ಎಸ್‌ ಆರ್‌ ಮಾದುಬಾವಿ, ವಿಬಿ ಘಾಟಗೆ, ವಿಎ ಸಾಟೆರವರ ತಂಡ ಪ್ರಕರಣದಲ್ಲಿನ ಆರೋಪಿಳಾದ 1) ಶುಭಂ ತಾನಾಜಿ ಸಾಥೆ(25), ತಂದೆ: ತಾನಾಜಿ ಗುಲ್‌ಬ್ರಾವೀ ಸಾಥೆ, ಕೇಶವ ನಗರ, ನಿಮ್‌ಗಾಂವ್ ಮಗರ್‌, ಮಲ್‌ಶಿರೋಸ್‌ ತಾಲೂಕು, ಸೋಲಾಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯ, 2) ಪ್ರವೀಣ ಅಪ್ಪ ಸಾಥೆ (23), ತಂದೆ: ಅಪ್ಪ ಶ್ಯಾಮರಾವ್‌ ಸಾಥೆ, ಕೇಶವ ನಗರ, ನಿಮ್‌ಗಾಂವ್ನ ಮಗರ್‌, ಮಲ್‌ಶಿರೋಸ್‌ ತಾಲೂಕು, ಸೋಲಾಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯ, 3) ನಿಲೇಶ ಬಾಪು ಕಸ್ತೂರಿ(19), ತಂದೆ: ಬಾಪು ಸಂಪತ್‌ ಕಸ್ತೂರಿ, ಕೇಶವ ನಗರ, ನಿಮ್‌ಗಾಂವ್ನ ಮಗರ್‌, ಮಲ್‌ಶಿರೋಸ್‌ ತಾಲೂಕು, ಸೋಲಾಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯ, 4) ಸಾಗರ ದತ್ತಾತ್ರೇಯ ಕಂಡಗಾಲೆ(32), ತಂದೆ:ದತ್ತಾತ್ರೇಯ ಚಾಂಗ್‌ದೇವ್‌ ಕಂಡಗಾಲೆ, ಕಂಡಾಲಿ, ಮಾಲ್‌ಶೀರೋಸ್‌ ತಾಲೂಕು, ಸೋಲಾಪುರ ಜಿಲ್ಲೆ ಮಹಾರಾಷ್ಟ್ರ ರಾಜ್ಯ, 5) ಬಾಗವ ರೋಹಿತ್‌ ಶ್ರೀಮಂತ್‌(25), ತಂದೆ: ಬಾಗವ ಶ್ರೀಮಂತ್, ಮಾಲ್‌ಶಿರಾಸ್, ಅಕ್ಲೂಜ್, ಸೋಲಾಪುರ, ಮಹಾರಾಷ್ಟ್ರ ರಾಜ್ಯ ಇವರುಗಳನ್ನು ದಿನಾಂಕ: 12.09.2025 ರಂದು ಮಹಾರಾಷ್ಟ್ರ ಜಿಲ್ಲೆ ಸೋಲಾಪುರ ಜಿಲ್ಲೆ ಮಲ್‌ಶಿರೋಸ್‌ ತಾಲೂಕು, ನಿಮ್‌ಗಾಂವ್‌, ಎಂಬಲ್ಲಿ ವಶಕ್ಕೆ ಪಡೆದು ಆರೋಪಿಗಳಿಂದ 1) 748.8 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ 74,88,000/-, 2) 4 ಕೆಜಿ 445 ಗ್ರಾಂ ಬೆಳ್ಳಿ ಅಂದಾಜು ಮೌಲ್ಯ 3,60,000/-, 3) ನಗದು ಹಣ 5,00,000/-, 4) ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಕಾರು ಅಂದಾಜು ಮೌಲ್ಯ 4,00,000/-, ಒಟ್ಟು ರೂ 87,48,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ.

Related posts

Leave a Comment