ಉಡುಪಿ: ನಗರದ ಸಮೀಪ ಮಹಿಳೆಯೊಬ್ಬರಿಗೆ ಆನ್ ಲೈನ್ ಶಾಪಿಂಗ್ ಹೆಸರಿನಲ್ಲಿ ಕರೆ ಮಾಡಿ ಸಾವಿರಾರು ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ವಂಚನೆಗೊಳಾಗದ ಮಹಿಳೆ ಜಹೀನ್ ಆಯೇಶಾ ಜಾಕೀರ್ ಎಂದು ತಿಳಿದು ಬಂದಿದೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ಜಹೀನ್ ಆಯೇಶಾ ಜಾಕೀರ್(27) ಇವರು ದಿನಾಂಕ 21/08/2025 ರಂದು ಸಂಜೆ 4:30 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ಯಾರೋ ಅಪರಿಚಿತ ವ್ಯಕ್ತಿಯು ಫೋನ್ ಕರೆ ಮಾಡಿ ತಾನು ನೈಕಾ ಎಂಬ ಆನ್ ಲೈನ್ ಶಾಪಿಂಗ್ ಕಂಪನಿಯಿಂದ ಮಾತನಾಡುತ್ತಿದ್ದು, ನೀವು ಪಿನ್ ಕೋಡ್ ನಂಬರ್ ನ್ನು ಸರಿಯಾಗಿ ನಮೂದಿಸದೇ ಇರುವುದರಿಂದ ನಿಮ್ಮ ಆರ್ಡರ್ ಸ್ಥಗಿತಗೊಂಡಿದೆ ಅದನ್ನು ಚಾಲ್ತಿಗೊಳಿಸಬೇಕಾದರೆ ನೀವು ಮೊದಲು ಹಣವನ್ನು ಪಾವತಿಸಬೇಕು ನಂತರ ಆ ಹಣ ನಿಮಗೆ ಮರುಪಾವತಿ ಆಗುತ್ತದೆ ಎಂದು ಹೇಳಿದ್ದು, ಅಪರಿಚಿತ ವ್ಯಕ್ತಿಯ ಮಾತುಗಳನ್ನು ನಂಬಿದ ಪಿರ್ಯಾದಿದಾರರು ಅಪರಿಚಿತ ವ್ಯಕ್ತಿಯು ನೀಡಿದ ಬ್ಯಾಂಕ್ ಖಾತೆಗೆ ಒಟ್ಟಾರೆಯಾಗಿ 47,191.50/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದು, ನಂತರ ಆರೋಪಿಯು ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ಮರುಪಾವತಿ ಮಾಡದೇ ಇದ್ದು, ಪಿರ್ಯಾದುದಾರರಿಗೆ ತಾನು ಸೈಬರ್ ವಂಚನೆಗೊಳಗಾದ ವಿಚಾರ ತಿಳಿದುಬಂದಿದ್ದು, ಆರೋಪಿಯು ಫಿರ್ಯಾದುದಾರರಿಗೆ ತಾನು ನೈಕಾ ಕಂಪನಿಯ ವ್ಯಕ್ತಿ ಎಂದು ಹೇಳಿ ಪಿರ್ಯಾದಿದಾರರಿಂದ 47,191.50/- ರೂಪಾಯಿ ಹಣವನ್ನು ಆನ್ ಲೈನ್ ಮೂಲಕ ವಂಚನೆ ಮಾಡಿರುವುದಾಗಿದೆ.