ಮಲ್ಪೆ: ಸಸ್ತಾನ ಕೋಡಿತಲೆ ನಿವಾಸಿ ರಾಮ ಖಾರ್ವಿ ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಮಲ್ಪೆ ಲೈಟ್ ಹೌಸ್ ಬಳಿ ಸಂಭವಿಸಿದೆ.
ರಾಮ ಖಾರ್ವಿ ಅವರ ಮಾಲಕತ್ವದ ದೋಣಿಯಲ್ಲಿ ಅವರು ಸುಮಾರು 25 ರಿಂದ 30 ವರ್ಷದಿಂದ ಒಬ್ಬರೇ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳುತಿದ್ದರು.
ಎಂದಿನಂತೆ ಈ ದಿನ ಕೂಡ ಮೀನುಗಾರಿಕೆಗೆ ತೆರೆಳಿದ್ದು ಮದ್ಯಾಹ್ನವಾದರೂ ಮನೆಗೆ ಬಾರದಿದ್ದ ಕಾರಣ ರಾಮ ಖಾರ್ವಿ ಅವರ ಮಗ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ ಅವರೊಂದಿಗೆ ಸಂಪರ್ಕ ವಾಗದ ಕಾರಣ ಮಲ್ಪೆ ಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಸೇರಿ ರಾತ್ರಿ ಹುಡುಕಾಟ ಮಾಡಿದ್ದಾರೆ. ಸುಳಿವು ಸಿಗದೇ ಇದ್ದಾಗ ಮಾರನೇ ದಿನ ಮಲ್ಪೆ ಲೈಟ್ ಹೌಸ್ ಬಳಿ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು, ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.

next post