Mangalore and Udupi news
Blog

ತಮಾಷೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕತ್ತರಿಯಿಂದ ಇರಿದು ಕೊಂದ ಗೆಳೆಯ

ಚಿಕ್ಕಬಳ್ಳಾಪುರ: ಅವರಿಬ್ಬರು ಹಣ್ಣಿನ ವ್ಯಾಪಾರಿಗಳು. ಜೊತೆಗೆ ಗೆಳೆಯರು. ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದರು. ಆದರೆ ಮಂಗಳವಾರ ಒಂದು ದುರಂತ ನಡೆದು ಹೋಗಿದೆ. ತಮಾಷೆಯಲ್ಲೇ ಶುರುವಾದ ಜಗಳ, ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಅರ್ಬಾಜ್ನನ್ನು ಫರ್ಹಾದ್ ಕೊಲೆ ಮಾಡಿದ್ದಾನೆ.

ಅರ್ಬಾಜ್ ಮತ್ತು ಫರ್ಹಾದ್‌, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಕೂಡ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಅರ್ಬಾಜ್‌ನ ಕೊಲೆ ಆಗಿದೆ.

ಚಿಂತಾಮಣಿ ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಇಬ್ಬರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿತ್ಯವೂ ಇಬ್ಬರು ಪರಸ್ಪರ ತಮ್ಮ ಮಾತಿನ ಮೂಲಕವೇ ಕಾಲೆಳೆಯುತ್ತಿದ್ದರು. ಅದರಂತೆಯೇ ನಿನ್ನೆ ಮಾತುನಾಡುತ್ತಾ ಗಲಾಟೆಗೆ ನಿಂತಿದ್ದಾರೆ. ನೋಡ ನೋಡುತ್ತಿದ್ದಂತೆ ಫರ್ಹಾದ್, ಅರ್ಬಾಜ್ ಮೇಲೆ ಕತ್ತರಿಯಿಂದ ಇರಿದಿದ್ದಾನೆ.

ಇಬ್ಬರ ನಡುವೆ ತಮಾಷೆಯಿಂದಲೇ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಫರ್ಹಾದ್ ಸೀದಾ ಕತ್ತರಿಯಿಂದ ಅರ್ಬಾಜ್ ಕುತ್ತಿಗೆಗೆ ಇರಿದಿದ್ದಾನೆ. ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದ ಅರ್ಬಾಜ್‌ನನ್ನ ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ ಬಿಟ್ಟಿದ್ದಾನೆ. ಸದ್ಯ ಚಿಂತಾಮಣಿ ನಗರ ಪೊಲೀಸರು ಆರೋಪಿ ಫರ್ಹಾದ್‌ನನ್ನ ಬಂಧಿಸಿದ್ದಾರೆ. ನಿತ್ಯ ಜೊತೆಗೆ ಕೂತು ವ್ಯಾಪಾರ ಮಾಡುತ್ತಿದ್ದರು. ಆದರೆ ಅವರ ನಡುವೆ ತಮಾಷೆಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ದುರಂತವೇ ಸರಿ.

Related posts

Leave a Comment