Mangalore and Udupi news
Blog

ಮಲ್ಪೆ ಬೀಚ್ ನಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ನೀರುಪಾಲು: ಒರ್ವನ ರಕ್ಷಣೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಈಜಾಡುತ್ತಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು, ಓರ್ವನನ್ನು ರಕ್ಷಿಸಿರುವ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಹಾಸನ ಮೂಲದ ಮಿಥುನ್ ಮತ್ತು ಶಶಾಂಕ್ ನೀರುಪಾಲಾಗಿದ್ದಾರೆ. ಇದನ್ನು ಗಮನಿಸಿದ ಸಹ ಪ್ರವಾಸಿಗರು ಶಶಾಂಕ್ ನನ್ನು ರಕ್ಷಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಥುನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ.
ಜಿಲ್ಲಾಡಳಿತದಿಂದ ಭಾರೀ ನಿರ್ಲಕ್ಷ್ಯ ಆರೋಪ:
ದಸರಾ ರಜೆ ಹಿನ್ನೆಲೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಗೆ ಆಗಮಿಸುತ್ತಿದ್ದಾರೆ. ಸಾವಿರಾರು ಜನರಿಗೆ ಕೇವಲ ಮೂರು ಜನ ಲೈಫ್ ಗಾರ್ಡ್ ನಿಯೋಜನೆ ಮಾಡಲಾಗಿದೆ. ಈಜು ಬರದ ಮೂರು ಲೈಫ್ ಗಾರ್ಡ್ ನಿಯೋಜನೆ ಮಾಡಿದ್ದಾರೆ. ಮಲ್ಪೆ ಬೀಚ್ ನಿರ್ವಹಣೆ ಬಗ್ಗೆ ಉಡುಪಿ ಜಿಲ್ಲಾಡಳಿತ ಭಾರೀ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಒಂದು ವಾರದಿಂದ ಜಿಲ್ಲಾಡಳಿತ ಜಲಕ್ರೀಡೆ ಬಂದ್ ಮಾಡಿದೆ. ಇದ್ರಿಂದ ನೂರಾರು ಸಂಖ್ಯೆಯಲ್ಲಿ ಇದ್ದ ಲೈಫ್ ಗಾರ್ಡ್ ಗಳು ವಾಪಸ್ ಮನೆಗೆ ಹೋಗಿದ್ದಾರೆ. ಜಿಲ್ಲಾಡಳಿತದ ಭಾರೀ ನಿರ್ಲಕ್ಷ್ಯಕ್ಕೆ ಪ್ರವಾಸಿಗರು ಬಲಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Related posts

Leave a Comment