Mangalore and Udupi news
Blog

ಪಡುಬಿದ್ರಿ ಖಡ್ಗೇಶ್ವರಿ ನಾಗ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ ಸಹಸ್ರಾರು ಭಕ್ತಾಧಿಗಳ ಸಮಾಗಮ

ಪಡುಬಿದ್ರಿ: ಇತಿಹಾಸ ಪ್ರಸಿದ್ದವೂ ಕೋಟ್ಯಾಂತರ ಭಕ್ತ ಸಮೂಹವನ್ನು ಹೊಂದಿರುವ ಪಡುಬಿದ್ರಿಯ ಬಯಲು ಆಲಯ ಶ್ರೀ ತಾಯಿ ಖಡ್ಗೇಶ್ವರಿ ನಾಗ ಬ್ರಹ್ಮಸ್ಥಾನದಲ್ಲಿ ವಾರ್ಷಿಕ ಅಜಕಾಯಿ ಸೇವೆ ಸಹಸ್ರಾರು ಭಕ್ತಾಧಿಗಳ ಕೂಡುವಿಕೆಯಿಂದ ಬಹಳ ವಿಜ್ರಂಬಣೆಯಿಂದ ನಡೆಯಿತು.

ಈ ಬಗ್ಗೆ ಮಾತನಾಡಿದ ಕ್ಷೇತ್ರಕ್ಕೆ ಸಂಬಂಧಿಸಿದ ಶ್ರೀ ವನದುರ್ಗ ಟ್ರಸ್ಟ್ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್, ಈ ಆಟಿ ತಿಂಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ನಡೆಯುತ್ತಿಲ್ಲ ಆದರೆ ಪುರಾತನದಿಂದಲೂ ಆಷಾಢ ತಿಂಗಳಲ್ಲಿ ಹದಿನಾರು ದಿನಗಳು ಕಳೆಯುವ ಸಂದರ್ಭ ಈ ಕ್ಷೇತ್ರದಲ್ಲಿ ಅಜಕಾಯಿ ಸೇವೆಯೊಂದೇ ನಡೆಯುತ್ತದೆ. ಈ ಹಿಂದೆ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಸೇರಿ ಸಮಾಜದವತಿಯಿಂದ ಈ ಅಜಕಾಯಿ ಸೇವೆ ನಡೆಯುತ್ತಿತ್ತು, ಕಾಲಕ್ರಮೇಣ ಈ ಕ್ಷೇತ್ರದ ಭಕ್ತರೆಲ್ಲಾ ಸೇರಿ ದೊಡ್ಡ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯ ನಡೆಯುತ್ತದೆ, ಸುಮಾರು ಹದಿನೈದು ಸಾವಿರ ತೆಂಗಿನ ಕಾಯಿಗಳು ಈ ಸೇವೆಗೆ ಭಕ್ತರಿಂದ ಸೇರಲ್ಪಡುತ್ತದೆ, ಈ ಸೇವೆಗೆ ಕೆಲವು ದಿನಗಳಿರುವಾಗ ಬ್ರಾಹ್ಮಣ ಸಮಾಜದ ಮಂದಿ ಸಮುದ್ರದ ನೀರಿಗಿಳಿದು ಅಲ್ಲಿಂದ ಮರಳು ತಂದು ಕ್ಷೇತ್ರದ ಪಕ್ಕದಲ್ಲಿ ರಾಶಿ ಆ ಬಳಿಕ ಅದನ್ನು ಶುದ್ಧೀಕರಣ ಮಾಡಿ ಅಜಕಾಯಿ ದಿನದಂದ್ದು ಕ್ಷೇತ್ರದ ಒಳಭಾಗದಲ್ಲಿ ಹರಡಲಾಗುವುದು, ಇಲ್ಲಿ ಯಾವುದೇ ಗಂಧ ಪ್ರಸಾದಗಳಿಲ್ಲ ಈ ದಿನ ಹರಡುವ ಸಮುದ್ರದ ಮರಳೇ ವರ್ಷವಿಡೀ ಪ್ರಸಾದ, ಅಜಕಾಯಿ ಸೇವೆಯ ದಿನ ಭಕ್ತರು ತಂದ ಸಿಯಾಳಗಳನ್ನು ನಾಗದೇವರಿಗೆ ಅಭಿಷೇಕ ಮಾಡಿ ಬಳಿಕ ಇಲ್ಲಿ ದೇವರೇ ಆಯ್ಕೆ ಮಾಡಿದ ದರ್ಶನ ಪಾತ್ರಿಗಳು ಅಜಕಾಯಿ ಒಡೆಯುವ ಕಲ್ಲಿಗೆ ಸೇವಾ ರೂಪದಲ್ಲಿ ಬಂದಿರುವ ತೆಂಗಿನ ಕಾಯಿಗಳನ್ನು ಒಡೆಯುವರು, ಬಳಿಕ ಬಂದ ಭಕ್ತ ಸಮೂಹಕ್ಕೆ ಒಡೆದಿರುವ ತೆಂಗಿನ ಕಾಯಿಗಳನ್ನು ಪ್ರಸಾದ ರೂಪವಾಗಿ ನೀಡಲಾಗುವುದು. ಈ ದಿನ ಬೆಳಗ್ಗಿನಿಂದ ಸಂಜೆಯವರೆಗೂ ಈ ಸೇವೆ ನಡೆಯುತ್ತದೆ, ಭಕ್ತರು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಲು ಇದು ಸಕಾಲವಾಗಿದೆ, ದೇವರು ತಮ್ಮ ಇಷ್ಟಾರ್ಥವನ್ನು ಈಡೇರಿಸಲಿ ಎಂಬುದೇ ನಮ್ಮ ಆರೈಕೆ ಎನ್ನುತ್ತಾರೆ. ಈ ಸಂದರ್ಭ ಅವರೊಂದಿಗೆ ಟ್ರಸ್ಟ್ ನ ಕೋಶಾಧಿಕಾರಿಗಳಾದ ಸುರೇಶ್ ವೈ, ಗುರಿಕಾರಾದ ಕೊರ್ನಾಯ ಗಿರೀಶ್ ಉಪಸ್ಥಿತರಿದ್ದರು.

Related posts

Leave a Comment