ಮಂಗಳೂರು: ನಗರದ ಬೆಂಡೋರ್‌ವೆಲ್ ಬಳಿ ಭಾನುವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬರು ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಬಶೀರ್ ಎಂಬ ಚಾಲಕ ಗಾಯಗೊಂಡಿದ್ದಾನೆ.
ಬಶೀರ್ ಎಂದು ಗುರುತಿಸಲಾದ ಚಾಲಕ ವಿಶ್ರಾಂತಿ ಪಡೆಯಲು ತನ್ನ ವಾಹನವನ್ನು ನಿಲ್ಲಿಸಿದಾಗ, ಅಪರಿಚಿತ ವ್ಯಕ್ತಿ ಬಂದು “ನೀವು ಪೊಲೀಸರಿಗೆ ತಿಳಿಸುತ್ತೀರಾ?” ಎಂದು ಬ್ಯಾರಿ ಭಾಷೆಯಲ್ಲಿ ಪ್ರಶ್ನಿಸಿದನು. ಇದಕ್ಕೆ ಪ್ರತಿಕ್ರಿಯೆಯಾಗಿ, ಚಾಲಕ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದನು, ಇದರಿಂದಾಗಿ ಇಬ್ಬರ ನಡುವೆ ಜಗಳವಾಯಿತು. ಈ ಜಗಳದಲ್ಲಿ, ಬಶೀರ್ ಅವರ ಹೊಟ್ಟೆಗೆ ಅಚರಿಚಿತ ವ್ಯಕ್ತಿ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.

previous post
next post