ಮಂಗಳೂರು: ರಾ.ಹೆ.75ರ ಅಡ್ಯಾರ್-ವಳಚ್ಚಿಲ್ ಮಧ್ಯೆ ಇರುವ ಸೋಮನಾಥ ಕಟ್ಟೆಯ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಅಡ್ಯಾರ್ ಕಣ್ಣೂರು ನಿವಾಸಿ ಇಟ್ಬಾಲ್ (42) ಎಂದು ಗುರುತಿಸಲಾಗಿದೆ.
ಇಕ್ಸಾಲ್ ಅವರು ದ್ವಿಚಕ್ರ ವಾಹನದಲ್ಲಿ ವಳಚ್ಚಿಲ್‌ನಿಂದ ಸೋಮನಾಥ ಕಟ್ಟೆ ಬಳಿ ಬರುವಾಗ ಪಂಪ್‌ವೆಲ್‌ನಿಂದ ವಳಚ್ಚಿಲ್‌ನತ್ತ ತೆರಳುತ್ತಿದ್ದ ಬೈಕ್ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಇಕ್ಸಾಲ್ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

