Mangalore and Udupi news
Blog

ಬ್ರಹ್ಮಾವರ : ಹಣ ಕಳ್ಳತನ ಪ್ರಕರಣ : ಆರೋಪಿ ಅರೆಸ್ಟ್…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿರುವ ಅಂತರರಾಜ್ಯ ಕಳ್ಳನ ಬಂಧಿಸಿ, 36000ರೂ. ಮೌಲ್ಯದ ನಗದು ಹಾಗೂ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಬಿಜಾಪುರದ ಸಂತೋಷ್‌ ಹನುಮಂತ ಕಟ್ಟಿಮನಿ (39) ಎಂದು ಗುರುತಿಸಲಾಗಿದೆ.

ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 04.08.2025 ರಂದು ಚಾಂತಾರು ಗ್ರಾಮದ ಶಿವಳ್ಳಿ ಹೋಟೆಲ್‌ ಎದುರುಗಡೆ ಕರ್ನಾಟಕ ಬ್ಯಾಂಕ್‌ ಎಟಿಎಮ್‌ ಬಳಿ ಪಿಗ್ಮಿ ಕಲೆಕ್ಷನ್‌ ಮಾಡಿದ ನಗದನ್ನು ಮೋಟಾರ್‌ ಸೈಕಲ್‌ನ ಸೈಡ್‌ ಬಾಕ್ಸ್‌ನಲ್ಲಿ ಇಟ್ಟು ಬೀಗ ಹಾಕಿ ಬಳಿಕ ಶಿವಳ್ಳಿ ಹೋಟೆಲ್‌ಗೆ ಹೋಗಿ ಪಿಗ್ಮಿ ಕಲೆಕ್ಷನ್‌ ಮಾಡಿ ವಾಪಾಸು ಬಂದು ನೋಡಿದಾಗ ಮೋಟಾರ್‌ ಸೈಕಲ್‌ನ ಬಾಕ್ಸ್‌ನಲ್ಲಿ ಇಟ್ಟ ನಗದು ಹಣವು ಕಾಣದೇ ಇದ್ದು ಪರಿಶೀಲಿಸಿದಾಗ ಯಾರೋ ಕಳ್ಳರು ಮೋಟಾರ್‌ ಸೈಕಲ್‌ನ ಬೀಗ ಒಡೆದು ಬಾಕ್ಸ್‌ನಲ್ಲಿದ್ದ ನಗದು ಹಣವನ್ನು ಮತ್ತು ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಇತರೆ ದಾಖಲೆ ಪತ್ರವನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣದಲ್ಲಿ ಆರೋಪಿಯಾದ ಸಂತೋಷ್‌ ಹನುಮಂತ ಕಟ್ಟಿಮನಿ (39) ತಂದೆ : ಹನುಮಂತ ಕಟ್ಟಿಮನಿ, ವಾಸ : ನಿಂಬಾಳ ,ಇಂಡಿ ತಾಲ್ಲೂಕು, ಬಿಜಾಪುರ ಜಿಲ್ಲೆ ಈತನನ್ನು ಬಂಧಿಸಿ ಆತನಿಂದ ಕಳವು ಮಾಡಿದ 32000ರೂ. ನಗದು ಹಾಗೂ ಮೊಬೈಲ್‌ನ್ನು ವಶಪಡಿಸಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷರಾದ ಹರಿರಾಂ ಶಂಕರ್ ಐ.ಪಿ.ಎಸ್.‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸುಧಾಕರ ನಾಯ್ಕ್ ರವರ ಮಾರ್ಗದರ್ಶನದಂತೆ ಪ್ರಭು ಡಿ.ಟಿ ಪೊಲೀಸ್‌ ಉಪಾಧೀಕ್ಷರು ಉಡುಪಿ ಉಪ ವಿಭಾಗ, ಉಡುಪಿರವರ ನಿರ್ದೇಶನದಂತೆ ಗೋಪಿಕೃಷ್ಣ, ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಕಾ ಮತ್ತು ಸು ಪಿ.ಎಸ್‌.ಐ ಅಶೋಕ್‌ ಮಾಳಬಗಿ, ಠಾಣಾ ತನಿಖಾ ಪಿ.ಎಸ್‌.ಐ ಸುದರ್ಶನ್‌ ದೊಡ್ಡಮನಿ, ಎ.ಎಸ್.ಐ ಜಯಕರ್‌ ಐರೋಡಿ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ಉದಯ್‌ ಅಮೀನ್,ಅಶೋಕ್‌‌ ಕೋಣೆ,ಅಶ್ವಿನ್‌ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಮಹಮ್ಮದ್‌ ಅಜ್ಮಲ್‌ ಹೈಕಾಡಿ ,ಕಿರಣ್‌ ಕುಮಾರ್, ಸಿದ್ದಪ್ಪ ಸಕನಳ್ಳಿ ಪಾಲ್ಗೊಂಡಿರುತ್ತಾರೆ.

Related posts

Leave a Comment