Mangalore and Udupi news
Blog

ಮುರತಂಗಡಿ ಡೈ ವರ್ಷನ್ ಕಬ್ಬಿಣದ ಗ್ರಿಲ್ಲಿಗೆ ರಿಕ್ಷಾ ಡಿಕ್ಕಿ : ಚಾಲಕ ಗಂಭೀರ

ರಾ.ಹೆ 169 : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿ ಪರಿಸರದ ಶ್ರೀ ಬಾಲಾಂಜನೇಯ ಯುವಕ ಸಂಘದ ಆಟದ ಮೈದಾನದ ಎದುರು ಅಕ್ಟೋಬರ್ 31 ಶುಕ್ರವಾರ ಮುಸ್ಸಂಜೆ ಸುಮಾರು 6:45 ರ ಹೊತ್ತಿಗೆ ರಸ್ತೆ ವಿಭಾಜಕದ ಕಬ್ಬಿಣದ ಗ್ರಿಲ್ಲಿಗೆ ಮೂಡಬಿದ್ರೆಯಿಂದ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದು ಚಾಲಕ ಗಂಭೀರವಾಗಿ ಗಾಯಗೊಂಡಿರುತ್ತಾನೆ.

ಹೊಡೆದ ರಭಸಕ್ಕೆ ರಿಕ್ಷಾ ನುಜ್ಜು ಗುಜ್ಜಾಗಿದ್ದು ರಿಕ್ಷಾ ಚಾಲನೆ ನಡೆಸುತ್ತಿದ್ದ ಆನೆಕೆರೆ ರಿಕ್ಷಾ ಗ್ಯಾರೇಜ್ ನ ಮಾಲಕರಾದ ಶ್ರೀ ಚಿತ್ರಾಕ್ಷ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಸಾಣೂರಿನ ಸೋಫಿಯಾ ಆಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.ರಾತ್ರಿ ವಾಹನಗಳು ಚಲಿಸುವಾಗ ಬೀದಿ ದೀಪಗಳಿಲ್ಲದೆ ಕತ್ತಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೈವಶನ್ ಬಳಿ ರೆಫ್ಲೆಕ್ಟರ್ ಅಥವಾ ಬ್ಲಿಂಕರ್ಗಳನ್ನು ಅಳವಡಿಸದೇ ಇರುವುದರಿಂದ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತ್ತಿರುತ್ತವೆ.


ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳು ಕೂಡಲೇ ಎಚ್ಚೆತ್ತು ವಾಹನಗಳ ಸುರಕ್ಷತೆಗಾಗಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಹೆದ್ದಾರಿ ಇಲಾಖೆಯವರಿಗೆ ಎಚ್ಚರಿಸಿರುತ್ತಾರೆ.

Related posts

Leave a Comment