ಮಂಗಳೂರು: ಫನ್ನೀರ್ ಬಳಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಆರೋಪದಲ್ಲಿ ಅಪರಿಚಿತನೋರ್ವ ರಿಕ್ಷಾ ಚಾಲಕನಿಗೆ ಇರಿದು ಗಾಯಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಬಶೀರ್ ಎಂದು ಗುರುತಿಸಲಾಗಿದೆ.ಚಾಲಕನ ಹೊಟ್ಟೆಗೆ ಇರಿದು ಗಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಗಾಯಾಳು ಆಟೋ ಚಾಲಕನಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

previous post