Mangalore and Udupi news
Blog

ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಬೇಟಿ

*ಜೆಸಿಐ ಬೆಳ್ಮಣ್ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಬೇಟಿ*

ದಿನಾಂಕ 4.08.2025 ರಂದು ವಲಯ 15ರ ಪ್ರತಿಷ್ಠಿತ ಹಾಗೂ ಹಿರಿಯ ಘಟಕಗಳಲ್ಲಿ ಒಂದಾದಂತಹ ಜೆಸಿಐ ಬೆಳ್ಮಣ್ ಗೆ ಜೆಸಿಐನ ರಾಷ್ಟ್ರೀಯ ಅಧ್ಯಕ್ಷರಾದ *JFS ಅಂಕುರ್ ಜುಂಜುನ್ ವಾಲ* ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಘಟಕದ *ಜೆಸಿಭವನ* ದ ಪುನರ್ ನಿರ್ಮಾಣ ಕಾರ್ಯಕ್ರಮ, ರಾಜ್ಯ ಹೆದ್ದಾರಿಯಲ್ಲಿರುವಂತಹ ಅತ್ಯಂತ ಪ್ರಮುಖ *ಬಸ್ ತಂಗುದಾನ* ದ ಪುನರ್ ನಿರ್ಮಾಣ, ಪ್ರಮುಖ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಸಮಯಗಳ ಬಗ್ಗೆ ತಿಳಿಸುವಂತಹ *ಡಿಜಿಟಲ್ ಆ್ಯಪ್* ಈ ಮೂರು ವಿಶೇಷ ಯೋಜನೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಘಟಕವನ್ನು ಉದ್ದೇಶಿಸಿ ಗೌರವದ ಮಾತುಗಳಾಡಿದರು ಈ ಸಂದರ್ಭದಲ್ಲಿ ರಾಷ್ಟ್ರ ಅಧ್ಯಕ್ಷರನ್ನು ಘಟಕದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರು ಹಾಗೂ ವಲಯದ ಅಧಿಕಾರಿಗಳು ಮತ್ತು ಬೆಳ್ಮಣ್ ಘಟಕದ ಪೂರ್ವ ಅಧ್ಯಕ್ಷರುಗಳು , ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು

Related posts

Leave a Comment