Mangalore and Udupi news
Blog

ತೋಕೂರು: ಕಂಬಳಬೆಟ್ಟು ಬಳಿ ರಸ್ತೆ ತಾತ್ಕಾಲಿಕ ದುರಸ್ತಿ

ಮುಲ್ಕಿ: ತಾಲೂಕು ವ್ಯಾಪ್ತಿಯ ಪಡುಪಣಂಬೂರು ತೋಕೂರು ಎಸ್ಕೋಡಿ ಕಿನ್ನಿಗೋಳಿ ಸಂಪರ್ಕ ರಸ್ತೆಯ ಕಂಬಳಬೆಟ್ಟು ಬಳಿ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಗ್ರಾಮೀಣ ಭಾಗದ ಈ ರಸ್ತೆ ಭಾರವಾದ ವಾಹನಗಳು ಎಗ್ಗಿಲ್ಲದೆ ಚಲಿಸಿ ಚಿಂದಿ ಉಡಾಯಿಸಿದೆ. ಕಂಬಳಬೆಟ್ಟು ಬಳಿ ರಸ್ತೆ ಕೆಸರು ಗದ್ದೆಯಂತಾಗಿದ್ದು ತೀರಾ ಇಕ್ಕಟ್ಟಾದ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಪಡುಪಣಂಬೂರು ಗ್ರಾಮ ಪಂಚಾಯತ್ ರಸ್ತೆಗೆ ತಾತ್ಕಾಲಿಕ ನೆಲೆಯಲ್ಲಿ ಜಲ್ಲಿ ಹಾಗೂ ಜಲ್ಲಿ ಹುಡಿ ಹಾಗೂ ತಾತ್ಕಾಲಿಕ ನೆಲೆಯಲ್ಲಿ ಸರಿಪಡಿಸಿದ್ದಾರೆ
ಸಾಮಾಜಿಕ ಕಾರ್ಯಕರ್ತರಾದ ಧರ್ಮಾನಂದ ಶೆಟ್ಟಿಗಾರ್ ಮಾತನಾಡಿ ಪಡುಪಣಂಬೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುತುವರ್ಜಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆ ದುರಸ್ತಿಪಡಿಸಲಾಗಿದೆ ಮಳೆಗಾಲ ಮುಗಿದ ಕೂಡಲೇ ಕೆಟ್ಟು ಹೋದ ರಸ್ತೆ ಕಾಂಕ್ರಿಟೀಕರಣ ಮಾಡಲಾಗುವುದು ಎಂದು ಹೇಳಿದ್ದಾರೆ

Related posts

Leave a Comment