ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಗೆಳೆಯರು ಬಳಗ ಸುರತ್ಕಲ್ ಇದರ ಸಹಯೋಗದಲ್ಲಿ, ದಿನಾಂಕ 26/9/2025 ರಂದು ನಡೆಯಲಿರುವ ಮಹಾ ಚಂಡಿಕಾ ಹೋಮ, ಪಿಲಿ ಗೊಬ್ಬು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅತಿಥಿಗಣ್ಯರ ಸಮ್ಮುಖದಲ್ಲಿ ನಡೆಯಿತು
ಪೂಜ್ಯರಾದ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳು ಆಶೀರ್ವದಿಸಿ ಗೆಳೆಯರ ಬಳಗದ ಹಾಗೂ ಮಂಜಣ್ಣ ಸೇವಾ ಬ್ರಿಗೇಡಿನ ಸೇವಾ ಕಾರ್ಯಗಳ ಬಗ್ಗೆ ಶ್ಲಾಘಿಸಿದರು. ಸಧೃಡ ಹಿಂದೂ ಸಮಾಜದ ಗುರಿಯೊಂದಿಗೆ ಮಹಾ ಚಂಡಿಕಾ ಹೋಮ ನಡೆಸುವುದರ ಮೂಲಕ ಲೋಕಕಲ್ಯಾಣವಾಗಲಿ , ಸಂಸ್ಥೆಯ ಹಾಗೂ ಭಾಗಿಗಳಾಗುವ ಸರ್ವರಿಗೂ ಒಳಿತಾಗಲಿ ಎಂದು ಆಶೀರ್ವದಿಸಿ, ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಮಹಾ ಚಂಡಿಕಾ ಹೋಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಶ್ರೀ ಶ್ರೀ ರಾಜಶೇಖರನಂದ ಸ್ವಾಮಿಗಳು ವಜ್ರದೇಹಿ ಮಠ ಗುರುಪುರ , ಗುತ್ತಿನಾರ್ ಜಯರಾಮ್ ಶೆಟ್ಟಿ ಕುಡು0ಬೂರು ಗುತ್ತು, ಮಾದವ ಸುವರ್ಣ ಕೊರಗಜ್ಜ ಸನ್ನಿಧಿ ಭಾಗ್ಯಚಂದ್ರ ರಾವ್ ಗೌರವ ಅಧ್ಯಕ್ಷರು ಫ್ರೆಂಡ್ಸ್ ಕೋಡಿಕೆರೆ, ರಮೇಶ್ ರಾವ್ ಸಂಚಾಲಕರು ಹಿಂದೂ ಅನುದಾನಿತ ಪೆರ್ಮುದೆ ಶಾಲೆ, ದಿನೇಶ್ ಅಮೀನ್ ರಾಧಾಕೃಷ್ಣ ಭಜನಾ ಮಂಡಳಿ ಮೈಂದಗುರಿ ಅಧ್ಯಕ್ಷರು, ದೇವದಾಸ್ ಕೋಡಿಕೆರೆ ಅಧ್ಯಕ್ಷರು ಫ್ರೆಂಡ್ಸ್ ಕೋಡಿಕೆರೆ,
ಜಯರಾಮ್ ಶೆಟ್ಟಿ ಅಧ್ಯಕ್ಷರು ಶನೀಶ್ವರ ಸೇವಾ ಸಮಿತಿ ಶಿವಾಜಿನಗರ,
ವಾಸುದೇವ ಕೃಷ್ಣನಗರ ಅಧ್ಯಕ್ಷರು ಕೃಷ್ಣಾ ಭಜನಾ ಮಂದಿರ, ಶ್ರೀಧರ ಪೂಜಾರಿ ತೋಕೂರು ಗೌರವ ಸಲಹೆಗಾರರು ಗಣೇಶ್ ಮಿತ್ರ ಮಂಡಳಿ ತೋಕೂರು
ರತನ್ ಕುಳಾಯಿ ಪ್ರಧಾನ ಕಾರ್ಯದರ್ಶಿಗಳು ಕೋರ್ದಬ್ಬು ದೈವಸ್ಥಾನ ಬಗ್ಗುಂಡಿ ಕುಳಾಯಿ, ರಂಜಿತ್ ಶೆಟ್ಟಿ ಕುಳಾಯಿ ಅಧ್ಯಕ್ಷರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಮತ್ತು ಸ್ಥಳೀಯ ಪ್ರಮುಖರ ಗೌರವ ಉಪಸ್ಥಿತಿ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ದೀಕ್ಷಿತ್ ಶೆಟ್ಟಿ ತೋಕೂರು ನಿರೂಪಣೆ ಮಾಡಿ ಸಂಸ್ಥೆಯ ಕಾರ್ಯ ವೈಖರಿ ಮತ್ತು ಕಾರ್ಯಕ್ರಮದ ಬಗ್ಗೆ ವಿವರಿಸಿದರು..