ಉಡುಪಿ: ಮಣಿಪಾಲ ಹುಡೋ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅ. 4ರಂದು ನಾಪತ್ತೆಯಾಗಿದ್ದ ಯುವಕನೋರ್ವ ಹಿರಿಯಡ್ಕ ಮಾಣೈ ಸೇತುವೆಯ ಬಳಿ ಸುವರ್ಣಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದವರು ಭಟ್ಕಳ ಕುಂಟುವಾಣಿ ಗ್ರಾಮದ ನಿವಾಸಿ ಜಯಂತ ನಾಗೇಶ್ ದೇಶ್ ಭಂಡಾರಿ (34) ಎಂದು ತಿಳಿದು ಬಂದಿದೆ.
ಅವರು ಮಾಣೈ ಸೇತುವೆ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದರು. ಮಾನಸಿಕ ಖಿನ್ನತೆ ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜುಗುಪ್ಪೆಗೊಂಡು ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.