ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಕ್ಕರಕಲ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಇಳಿದಿದ್ದು ಕಾರಿನಲ್ಲಿದ್ದ ಮಂಗಳೂರು ನಿವಾಸಿಗಳಾದ ಇಬ್ಬರು ಪವಾಡ ಸದೃಶ ಪಾರಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಗುರುವಾರ ರಾತ್ರಿ ಸುಮಾರು 8:30 ಗಂಟೆಗೆ ಮುಲ್ಕಿ ಸಮೀಪದ ಕೊಕ್ಕರಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೀದಾ ಹೆದ್ದಾರಿ ಬದಿಯ ತೋಡಿಗೆ ಇಳಿದಿದೆ.
ಕೂಡಲೆ ಸ್ಥಳೀಯರು ದಾವಿಸಿ ಕಾರಿನೊಳಗಿದ್ದ ಇಬ್ಬರನ್ನು ಹೊರ ತೆಗೆದಿದ್ದಾರೆ. ಅಪಘಾತಕ್ಕೆ ಬಾರಿ ಮಳೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಬಳಿಕ ಹೆದ್ದಾರಿ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ಆಗಮಿಸಿ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ

previous post