Mangalore and Udupi news
Blog

ವರ್ಕ್‌ ಫ್ರಂ ಹೋಂ ಆಮೀಷವೊಡ್ಡಿ ವಂಚನೆ : ಆರೋಪಿ ಪೊಲೀಸ್ ವಶಕ್ಕೆ

ಕಾರ್ಕಳ : ವರ್ಕ್‌ ಫ್ರಂ ಹೋಮ್‌ ಉದ್ಯೋಗ ನೀಡುವುದಾಗಿ ನಂಬಿಸಿ 2 ಲಕ್ಷ ರೂ. ವಂಚಿಸಿದ ಸೈಬರ್‌ ವಂಚಕನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಹೆಬ್ರಿ ತಾಲೂಕು ನಾಲ್ಕೂರು ಗ್ರಾಮದ ರಮೇಶ ನಾಯ್ಕ ಅವರು 2024ರ ಡಿಸೆಂಬರ್ ನಲ್ಲಿ Lokal Job Application ಆಪ್‌ನಲ್ಲಿ Sunshine HR Solution ಎಂಬ ಹೆಸರಿನ ಕಂಪೆನಿ ನೀಡಿದ ಜಾಹೀರಾತಿಗೆ ಮಾರುಹೋಗಿ ಡಾಟಾ ಎಂಟ್ರಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಆ ಕಂಪನಿಯ ಹೆಸರಿನಲ್ಲಿ ರಮೇಶರನ್ನು ವಿವಿಧ ಸಂಖ್ಯೆಗಳಿಂದ ಮತ್ತು ವಾಟ್ಸಪ್ ಮುಖಾಂತರ ಸಂಪರ್ಕಿಸಿ Security Deposit, Account Creation, Error Modify ಎಂದು ನಂಬಿಸಿ Google Pay, Phone Pay ಮುಖಾಂತರ ಒಟ್ಟು 2,02,046 ರೂ. ಪಾವತಿಸಿಕೊಂಡು ವಂಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಜು. 24ರಂದು ಬೆಂಗಳೂರಿಗೆ ತೆರಳಿ ಆರೋಪಿ ಯಶವಂತ ಪುರದ ಶ್ರೀಧರ್ ವಿ. (27) ಎಂಬಾತನನ್ನು ವಶಕ್ಕೆ ಪಡೆದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷಾ ಪ್ರಿಯಂವದಾ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ ಡಿ. ಆರ್. ನೇತೃತ್ವದಲ್ಲಿ ರಚಿಸಲಾದ ತನಿಖಾ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಯಿಂದ 10 ಸಾವಿರ ರೂ. ಮೌಲ್ಯದ ಮೊಬೈಲ್, 3 ವಿವಿಧ ಬ್ಯಾಂಕಿನ ಎಟಿಎಂ. ಕಾರ್ಡ್ ಗಳು 1,74,960 ರೂ. ಸ್ವಾದೀನಪಡಿಸಿಕೊಳ್ಳಲಾಗಿದೆ. ಆತನ ಬ್ಯಾಂಕ್ ಖಾತೆಯಲ್ಲಿದ್ದ 27,086 ರೂ. Freeze ಮಾಡಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯ ಎಸ್.ಐ ರವಿ ಬಿ.ಕೆ., ಸಿಬ್ಬಂದಿ ಸುಜೀತ್ ಕುಮಾರ್, ಅಜೆಕಾರು ಸಿಬ್ಬಂದಿ ಸತೀಶ್ ಬೆಳ್ಳೆ, ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿಯ ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ಪ್ರಶಾಂತ್, ವಿಶ್ವನಾಥ, ನಾಗರಾಜ, ಶಶಿ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಮತ್ತು ನಿತೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related posts

Leave a Comment