Mangalore and Udupi news
Blog

ಮಲ್ಪೆ : ಬೈಕ್ ನಲ್ಲಿ ಗಾಂಜಾ ಮಾರಾಟ : ಮೂವರು ಅರೆಸ್ಟ್…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಬೈಕ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಅಚ್ಚುತ ಎನ್‌ @ ಕಿರಣ್‌ ಮೆಂಡನ್‌(45), ಪುನೀತ್ @ ಪುನೀತ್‌ ರಾಜ್‌(24) ಹಾಗೂ ಚಂದ್ರಕಾಂತ ಕಟ್ಟ ಎಂದು ಗುರುತಿಸಲಾಗಿದೆ.


ಮಲ್ಪೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ: 05/09/2025 ರಂದು ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು KMP ರಸ್ತೆಯಲ್ಲಿರುವ ಶ್ರೀ ಬೊಬ್ಬರ್ಯ ದೈವಸ್ಥಾನದ ಬಳಿ ನಿಲ್ಲಿಸಿಕೊಂಡಿರುವ KA 05 HU 3636 ನಂಬ್ರದ ಹಳದಿ ಮೋಟಾರು ಸೈಕಲ್‌ನಲ್ಲಿ 4 ಮಂದಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಅನೀಲ್‌ ಕುಮಾರ್‌.ಡಿ, ಉಪ ನಿರೀಕ್ಷಕರು(ಕಾ&ಸು), ಮಲ್ಪೆ ಪೊಲೀಸ್ ಠಾಣೆ ಇವರು ಸಿಬ್ಬಂಧಿಯವರೊಂದಿಗೆ 16.45 ಗಂಟೆಗೆ ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ 4 ವ್ಯಕ್ತಿಗಳು KA 05 HU 3636 ನಂಬ್ರದ ಹಳದಿ ಬಣ್ಣದ ಹೊಂಡ ಶೈನ್‌ ಮೋಟಾರು ಸೈಕಲ್‌ ನ್ನು ನಿಲ್ಲಿಸಿಕೊಂಡಿದ್ದು, ಪೊಲೀಸರನ್ನು ಕಂಡು KTM ಮೋಟಾರು ಸೈಕಲ್‌ ನ ಹಿಂಬದಿ ಕುಳಿತಿದ್ದ ಒಬ್ಬನು ಓಡಿ ಹೋಗಿದ್ದು, ಉಳಿದ ಮೂವರನ್ನು ಸುತ್ತುವರಿದು ಆವರನ್ನು ವಿಚಾರಣೆ ಮಾಡಿದಲ್ಲಿ 1)ಅಚ್ಚುತ ಎನ್‌ @ ಕಿರಣ್‌ ಮೆಂಡನ್‌(45), ತಂದೆ: ನವೀನ್‌ ಕರ್ಕೆರ, ಬೋಳೂರು, ಉರ್ವ, ಅಶೋಕ್‌ ನಗರ, ಮಂಗಳೂರು, 2)ಪುನೀತ್ @ ಪುನೀತ್‌ ರಾಜ್‌(24)‌, ತಂದೆ: ರಾಜು, ಗುಜ್ಜರಬೆಟ್ಟು, ಪಡುತೋನ್ಸೆ, ಉಡುಪಿ ಮತ್ತು 3)ಚಂದ್ರಕಾಂತ ಕಟ್ವ, ತಂದೆ: ಕೊಲಿಯ ಕಟ್ವ, ಕಾಂತ್‌ ಮರ್ದ್‌ಕೊಟ್ಟೆ, ಒಡಿಸ್ಸಾ, ಪ್ರಸ್ತುತ ಪಡುತೋನ್ಸೆ, ಮಲ್ಪೆ ಎಂಬುದಾಗಿ ತಿಳಿಸಿದ್ದು, ಮೋಟಾರು ಸೈಕಲ್‌ ನಲ್ಲಿ ಕುಳಿತಿದ್ದ ವ್ಯಕ್ತಿ ಕೊಳಲಗಿರಿಯ ಕಿಶೋರ ಎಂಬಾತನು ಓಡಿಹೋಗಿದ್ದು, ಸದ್ರಿ ಮೋಟಾರ್‌ ಸೈಕಲ್‌ ನಲ್ಲಿನ ಸೀಟ್‌ನ ಕೆಳಭಾಗವನ್ನು ಪರೀಕ್ಷಿಸಿದ್ದಲ್ಲಿ ಗಾಂಜಾ ಮತ್ತು MDMA ಸೇರಿ ಸಣ್ಣ ಸಣ್ಣ ಪ್ಯಾಕೇಟ್ ಇರುವುದನ್ನು ಖಚಿತಪಡಿಸಿಕೊಂಡು, ಆತನ ಹತ್ತಿರವಿದ್ದ 3‌ ಗ್ರಾಂ 480 ಮಿಲ್ಲಿ ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ ರೂ 3,000/- ಹಾಗೂ MDMAನ ಅಂದಾಜು ಮೌಲ್ಯ ರೂ 10,000/- ಆಗಿರುತ್ತದೆ. ಕೃತ್ಯಕ್ಕೆ ಉಪಯೋಗಿಸಿದ KA 05 HU 3636 ನಂಬ್ರದ ಹಳದಿ ಮತ್ತು ಕಪ್ಪು ಬಣ್ಣದ KTM ಮೋಟಾರು ಸೈಕಲನ್ನು


ಸ್ವಾಧೀನಪಡಿಸಿಕೊಂಡಿದ್ದು, ಅದರ ಅಂದಾಜು ಮೌಲ್ಯ 1,50,000/- ರೂಪಾಯಿ ಆಗಿರುತ್ತದೆ. ಆರೋಪಿತರು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಹಾಗೂ MDMA ಇಟ್ಟುಕೊಂಡು ಮಾರಾಟ ಮಾಡುವರೇ ಕಾಯುತ್ತಿರುವುದನ್ನು ದೃಢಪಡಿಸಿಕೊಂಡು ಆಪಾದಿತರು ಹಾಗೂ ಸೊತ್ತನ್ನು ಸ್ವಾದೀನ ಪಡಿಸಿಕೊಂಡಿರುವುದಾಗಿದೆ.

Related posts

Leave a Comment