ಕಾರ್ಕಳ: ನಂದಳಿಕೆ ಗ್ರಾಮದ ಕೊಡ್ಡರಬೆಟ್ಟು ಎಂಬಲ್ಲಿ ಮನೆಯವರು ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಮೃತರನ್ನು ನಂದಳಿಕೆಯ ಸುರೇಖಾ ಎಂಬವರ ಮಗ ಸುಮಂತ್ ದೇವಾಡಿಗ(16) ಎಂದು ಗುರುತಿಸಲಾಗಿದೆ.

ಸುಮಂತ್ ನಿಟ್ಟೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದನು. ನ.12ರಂದು ಸಂಜೆ ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದನು ಎಂದು ತಿಳಿದು ಬಂದಿದೆ. ಆತನನ್ನು ಹುಡುಕಾಡಿದಾಗ ನ. 13ರಂದು ಮಧ್ಯಾಹ್ನ ವೇಳೆ ಕೊಡ್ಡರಬೆಟ್ಟು ಕಲ್ಲಿನ ಕೋರೆಯ ನಿಂತ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೊಬೈಲ್ ಕೊಡಿಸದ ಸಿಟ್ಟಿನಲ್ಲಿ ಆತ ಕಲ್ಲುಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

