ಮಂಗಳೂರು: ಕಾರೊಂದು ಹೊತ್ತಿ ಉರಿದ ಘಟನೆ ನಗರದ ನಂತೂರು ಬಳಿ ನಡೆದಿದೆ.
ಬಿಳಿ ಬಣ್ಣದ ಹುಂಡೈ ವೆರ್ನ ಕಾರಿನಲ್ಲಿ ದಾರಿ ಮಧ್ಯೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ ಎಂದು ತಿಳಿದು ಬಂದಿದೆ.
ಪಾಲಿಕೆಯ ನೀರು ಸರಬರಾಜು ಟ್ಯಾಂಕರ್ ಸ್ಥಳಕ್ಕೆ ಆಗಮಿಸಿದೆ. ಟ್ಯಾಂಕರ್ ಸಿಬ್ಬಂದಿ ನೀರು ಹಾಯಿಸುವ ಮೂಲಕ ಕಾರಿನಲ್ಲಿ ಉಂಟಾದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

