ಬಂಟ್ವಾಳ; ಪ್ಲಾಸ್ಟಿಕ್ ಸಾಚೆಟ್‌ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ದಳದವರು ಬಂಧಿಸಿದ್ದಾರೆ. ಸಂತೋಷ್ ಸೋಂಕರ್(28) ಬಂಧಿತ ಆರೋಪಿ.

ಈತ ಬಿ.ಸಿರೋಡ್ ಸೋಮಯಾಜಿ ಹಾಸ್ಪಿಟಲ್ ಬಳಿ ಇರುವ ರೈಲ್ವೆ ಹಳಿ ಹತ್ತಿರ 1173 ಪ್ಲಾಸ್ಟಿಕ್ ಸಾಚೆಟ್‌ಗಳಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಈತನಿಂದ ಒಟ್ಟು 6.590 ಕೆ.ಜಿ ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಆರೋಪಿಗೆನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರ ಮತ್ತು ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಹಾಗೂ ಅಬಕಾರಿ ಪೇದೆ ಪ್ರಕಾಶ್, ಬಸವರಾಜ, ಶ್ರೀನಿವಾಸ ಅವರು ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
previous post

