ಮಂಗಳೂರು: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು । ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಪತ್ತೆಯಾದವರು ಪಿಲಿಪ್ ಪಾರ್ತೊಲೋಮಿಯಾ (56) ಎಂದು ತಿಳಿದು ಬಂದಿದೆ.
ಅ.22ರಂದು ರಾತ್ರಿ 11ಕ್ಕೆ ಇತರ 10 ಮಂದಿಯೊಂದಿಗೆ ನಗರದ ಬಂದರಿನ ಬೋಟ್‌ನಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು.ಅ.25ರಂದು ರಾತ್ರಿ 11ಕ್ಕೆ ಮೀನು ಹಿಡಿಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ಬೋಟ್‌ನಿಂದ ಆಳ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಅವರನ್ನು ಕಾಪಾಡುವ, ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದಾಗಿ ಬೋಟ್ ಚಾಲಕ ತಿಳಿಸಿರುವುದಾಗಿ ಪಿಲಿಪ್ ಪಾರ್ತೊಲೋಮಿಯಾರ ಪುತ್ರಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

