ಉಡುಪಿ : ರಾಷ್ಟ್ರೀಯ ಹೆದ್ದಾರಿ 169ಎ ಎಂಜಿಎಂ ಕಾಲೇಜು ಬಳಿ, ದ್ವಿಚಕ್ರ ವಾಹನ ಪಾದಚಾರಿ ನಡುವೆ ಅಪಘಾತ ಸಂಭವಿಸಿ ಪಾದಚಾರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.


ಅಪಘಾತ ತೀವ್ರತೆಗೆ ಪಾದಚಾರಿಗೆ ತಲೆ ಹಾಗೂ ಕಾಲು ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ನೆರವಿಗೆ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಗಾಯಾಳುವನ್ನು ಬಸ್ಸು ಎಜೆಂಟ್ ಶಬರೀಶ್ ಶೆಣೈಯವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಬಳಿಕ ಗಾಯಾಳುವಿಗೆ ತುರ್ತು ಹೆಚ್ಚಿನ ಚಿಕಿತ್ಸೆ ಅಗತ್ಯತೆ ಇದ್ದುದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗಾಯಾಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಗಾಯಾಳುವನ್ನು ರಂಗಪ್ಪ (62 ವ) ಎಂದು ಗುರುತಿಸಲಾಗಿದೆ. ಈತ ಬಾಗಲಕೋಟೆಯ ನಿವಾಸಿ, ಪ್ರಸ್ತುತ ಎಂ ಜಿ ಎಂ ಕಾಲೇಜಿನ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನೆಂದು ತಿಳಿದುಬಂದಿದೆ.

