ಮಂಗಳೂರು : ನಗರದ ಸಮೀಪ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ವ್ಯಕ್ತಿ ರಾಮ್ ಬ್ರಿಕ್ಷಾ ಸಾಯಿ ಎಂದು ತಿಳಿಯಲಾಗಿದೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯದಿ Bhavani Shankar ದಾರರು ಮಂಗಳೂರಿನ ಸುಲ್ತಾನ್ ಭತ್ತೇರಿಯಲ್ಲಿ ಮೀನುಗಾರಿಕಾ ಬೋಟ್ ಮೂಲಕ ಮೀನುಗಾರಿಕೆಯನ್ನು ಮಾಡಿಕೊಂಡಿರುತ್ತೇನೆ. ಮೀನುಗಾರಿಕೆ ಬೋಟ್ ನಲ್ಲಿ ಕೆಲಸಕ್ಕೆ ಜನರು ಬೇಕಾಗಿದ್ದು ಆದ ಕಾರಣ ಛತ್ತೀಸ್ ಗಢ ರಾಜ್ಯದ ಪರಿಚಯದ ಅಶೋಕ್ ರಾಮ್ ಎಂಬುವರ ಮೂಲಕ ಸುಮಾರು 10 ಜನರನ್ನು ಛತ್ತೀಸ್ ಗಢದಿಂದ ದಿನಾಂಕ 03-09-2025 ರಂದು ಮಂಗಳೂರಿಗೆ ಕರೆಸಿಕೊಂಡಿದ್ದು ಅವರೆಲ್ಲಾ ಬೋಟ್ ನಲ್ಲಿಯೇ ವಾಸ ಮಾಡಿಕೊಂಡಿರುತ್ತಾರೆ. ನಂತರ ಬೋಟ್ ನ್ನು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದು, ಅದರಂತೆ ಎಲ್ಲಾ ಕೆಲಸದವರಿಗೆ ತಯಾರಾಗಿರಲು ಪಿರ್ಯಾದಿದಾರರು ತಿಳಿಸಿರುತ್ತಾರೆ. ಅದರಂತೆ ರಾಮ್ ಬ್ರಿಕ್ಷಾ ಸಾಯಿ ಎಂಬಾತನು ದಿನಾಂಕ 05-09-2025 ರಂದು ಸಂಜೆ 6.30 ಗಂಟೆಗೆ ಬೋಟ್ ನಲ್ಲಿ ಕೆಲಸ ಮಾಡುವ ಅಶೋಕ್ ರಾಮ್ ಎಂಬಾತನಲ್ಲಿ ನಾನು ಇಲ್ಲಿಯೇ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು ಮರಳಿ ಬಂದಿರುವುದಿಲ್ಲ. ಪಿರ್ಯಾದಿದಾರರು ದಿನಾಂಕ 06-09-2025 ರಂದು ಬೆಳಿಗ್ಗೆ 10.00 ಗಂಟೆಗೆ ಬೋಟ್ ಹತ್ತಿರ ಬಂದು ಕೆಲಸದವರಿಗೆ ಖರ್ಚಿಗೆ ಹಣವನ್ನು ನೀಡಿಲು ಬಂದಾಗ ಕೆಲಸಕ್ಕೆ ಬಂದಂತಹ ಛತ್ತೀಸ್ ಗಢ ಮೂಲದ ವ್ಯಕ್ತಿ ರಾಮ್ ಬ್ರಿಕ್ಷಾ ಸಾಯಿ ಪ್ರಾಯ 45 ವರ್ಷ ಎಂಬಾತನು ನಿನ್ನೆ ಅಂಗಡಿಗೆ ಹೋದವನು ಇಲ್ಲಯವರೆಗೂ ಬೋಟ್ ಗೆ ವಾಪಸ್ ಬಾರದೇ ಇದ್ದು ಕಾಣೆಯಾಗಿರುವ ಬಗ್ಗೆ ಅಶೋಕ್ ರಾಮ್ ಪಿರ್ಯಾದಿದಾರರಲ್ಲಿ ತಿಳಿಸಿರುತ್ತಾನೆ. ನಂತರ ಪಿರ್ಯಾದಿದಾರರು ಈ ಬಗ್ಗೆ ಅವನನ್ನು ಕರೆದುಕೊಂಡು ಮಂಗಳೂರಿನಲ್ಲಿ ಎಲ್ಲಾ ಕಡೆಗೂ ಹುಡುಕಾಡಿದ್ದು ಎಲ್ಲಿಯೋ ಪತ್ತೆಯಾಗದೇ ಇದ್ದು, ನಂತರ ಮನೆಯವರಲ್ಲಿ ಚರ್ಚಿಸಿ ನಂತರ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾದ ರಾಮ್ ಬ್ರಿಕ್ಷಾ ಸಾಯಿ ಪ್ರಾಯ 45 ವರ್ಷ ಎಂಬವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ.