ಉಳ್ಳಾಲ: ಮನೆಯಂಗಳದಲ್ಲಿ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆ ಸಮೀಪದ ಬಾವಿಗೆ ಬಿದ್ದ ಘಟನೆ ಕೊಣಾಜೆಯ ಬೆತ್ಮ ಸಮೀಪದ ಮಾರಿಯಮ್ಮಗೋಳಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.

ತಕ್ಷಣ ಮಗುವಿನ ಚಿಕ್ಕಪ್ಪ ಹಾಗೂ ಸ್ಥಳೀಯ ಯುವಕ ಬಾವಿಗಿಳಿದು ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮಗು ಆಡುತ್ತಾ ಅಂಗಳ ಸಮೀಪದ ಬಾವಿಗೆ ಬಿದ್ದಿದ್ದು ತಕ್ಷಣ ಮನೆ ಮಂದಿ ಬೊಬ್ಬೆ ಹಾಕಿದಾಗ ಮಗುವಿನ ಚಿಕ್ಕಪ್ಪ ಜೀವನ್ ಬಾವಿಗೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಸ್ಥಳೀಯ ಯುವಕ ವಿವೇಕ್ ಪೂಜಾರಿ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

