Mangalore and Udupi news
Blog

ಮಂಗಳೂರು: ಡಿವೈಡರ್‌ಗೆ ಡಿಕ್ಕಿಯಾದ ಬಸ್‌

ಮಂಗಳೂರು: ನಂತೂರು ಸಮೀಪ ಸಿಟಿ ಬನ್ನೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.ಘಟನೆಯಿಂದ ಯಾರಿಗೂ ಅಪಾಯ ಸಂಭವಿಸಿಲ್ಲ.ಆದರೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.

ವಾಮಂಜೂರು ಕಡೆಯಿಂದ ಬರುತ್ತಿದ್ದ ಸಾಯೀಷ ಎಂಬ ಸಿಟಿ ಬಸ್ ನಂತೂರು ಸಿಗ್ನಲ್ ದಾಟಿ ಮಲ್ಲಿಕಟ್ಟೆ ಕಡೆಗೆ ಬರುತ್ತಿತ್ತು. ಬಸ್ ಮುಂಭಾಗ ಶಾಲಾ ಬಸ್‌ ಸಾಗುತ್ತಿದ್ದು, ಹಿಂಭಾಗ ಮತ್ತೊಂದು ಬಸ್‌ ಬರುತ್ತಿತ್ತು ಎಂದು ಹೇಳಲಾಗಿದೆ.ಈ ಸಂದರ್ಭ ಬಸ್‌ನ ಸ್ಟೇರಿಂಗ್ ಲಾಕ್ ಎಂಡ್ ಕಟ್ ಆಗಿ, ಟೈರ್ ನಿಯಂತ್ರಣ ಕಳೆದುಕೊಂಡು ಬಸ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಇದರಿಂದ ಬೀದಿ ದೀಪದ ಕಂಬವೊಂದು ಉರುಳಿ ಬಿದ್ದಿತು.ರಸ್ತೆಯ ವಿರುದ್ದ ಭಾಗದಲ್ಲೂ ಸಾಕಷ್ಟು ವಾಹನಗಳು ಸಾಗುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಧಾವಿಸಿದ್ದು, ಬಸ್ಸನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ತಿಳಿದು ಬಂದಿದೆ.

Related posts

Leave a Comment