ಅಮಾಸೆಬೈಲು: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅಮಾಸೆಬೈಲು ಎಂಬಲ್ಲಿ ವ್ಯಕ್ತಿಯೋರ್ವರು ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ಸುರೇಶ್ ಲಾಕ್ರಾ ಎಂದು ತಿಳಿದು ಬಂದಿದೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ವಿವರ : ಮೃತ ಸುರೇಶ್ ಲಾಕ್ರಾ ಪ್ರಾಯ:39 ವರ್ಷ, ಇವರು ದೆಹಲಿ ರಾಜ್ಯದವರಾಗಿದ್ದು, ಸುಮಾರು 04 ವರ್ಷಗಳಿಂದ ,ಪಿರ್ಯಾದಿದಾರರ ಮನೆಯಲ್ಲಿ ಕೃಷಿ ಕೆಲಸಮಾಡಿಕೊಂಡಿದ್ದು, ಮೃತ ಸುರೇಶ್ ಲಾಕ್ರಾವರು 02 ದಿನದಿಂದ ಸ್ವಲ್ಪ ಮಂಕಾಗಿದ್ದು, ವಿಚಾರಿಸಿದಾಗ ತನ್ನ ಮಗನಿಗೆ ಫಿಟ್ಸ್ ಕಾಯಿಲೆ ಇದ್ದು, ಇದೇ ವಿಚಾರಕ್ಕೆ ಚಿಂತೆಯಾಗಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ:24/10/2025 ರಂದು ಸಂಜೆ 05:30 ಕ್ಕೆ ಕೆಲಸಮುಗಿಸಿ ರೂಂ ಗೆ ಹೋದವರು ದಿನಾಂಕ:25/10/2025 ರಂದು ಬೆಳಗ್ಗೆ ಕೆಲಸಕ್ಕೆ ಬಾರದೇ ಇರುವುದನ್ನು ಕಂಡು ಹುಡುಕಾಡಿದಾಗ ಪಿರ್ಯಾದುದಾರರ ತೋಟದಲ್ಲಿರುವ ಹಲಸಿನ ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದು ನೇಣುಹಾಕಿಕೊಂಡು ಮೃತಪಟ್ಟಿದ್ದು, ಮೃತರುದಿನಾಂಕ:24/10/2025 ರಂದು ರಾತ್ರಿ 09:೦೦ ಗಂಟೆಯಿಂದ ದಿನಾಂಕ:25/10/2025 ರಂದು 10:00 ಗಂಟೆಯ ನಡುವೆ ಅವಧಿಯಲ್ಲಿ ತನ್ನ ಮಗನಿಗಿರುವಫಿಟ್ಸ್ ಕಾಯಿಲೆ ವಿಚಾರ ಅಥವಾ ಬೇರೆ ಯಾವುದೋ ವಿಚಾರಕ್ಕೆ ಮನನೊಂದುನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಅಶೋಕ್ ಕುಮಾರ್ ಕೊಡ್ಗಿ, ಪ್ರಾಯ::71 ವರ್ಷ,ತಂದೆ: ಎ. ಜಿ. ಕೊಡ್ಗಿ, ವಾಸ: ಮಚ್ಚಟ್ಟು ಗ್ರಾಮ ರವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದು ಠಾಣಾ ಯು ಡಿ ಆರ್ ಕ್ರಮಾಂಕ : 13/2025 ಕಲಂ:194 ಬಿ ಎನ್ ಎಸ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

