Mangalore and Udupi news
Blog

ಮಂಗಳೂರು : ಅಕ್ರಮ ಇ ಸಿಗರೇಟು ಮಳಿಗೆಗೆ ದಾಳಿ : 9.72ಲಕ್ಷ ಮೌಲ್ಯದ ಸೊತ್ತು ವಶಕ್ಕೆ…!!

ಮಂಗಳೂರು: ನಗರದ ಲಾಲ್‌ಬಾಗ್‌ನಲ್ಲಿರುವ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಇ-ಸಿಗರೇಟು ಮತ್ತು ಇತರೆ ಪರಿಕರಗಳು ಸೇರಿದಂತೆ 9,72,745ರೂ. ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಅಂಗಡಿಯ ಮಾಲಕರು ಸೇರಿ ಮೂವರು ಆರೋಪಿಗಳ ಮೇಲೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಹೌಸ್‌ನ ಸಂತೋಷ್(32), ಕುದ್ರೋಳಿ ಜಾಮೀಯಾ ಮಸೀದಿ ಬಳಿ ನಿವಾಸಿ ಇಬ್ರಾಹಿಂ ಇರ್ಷಾದ್(33) ಹಾಗೂ ಶಾಪ್ ಮಾಲಕ ಶಿವು ದೇಶಕೋಡಿ ಎಂಬುವರ ವಿರುದ್ಧ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

ಮಂಗಳೂರು ನಗರದ ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೇಕ್ಸ್‌ನ ಆಮಂತ್ರಣ ಎಂಬ ಹೆಸರಿನ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಕ್ರಮವಾಗಿ ಸ್ವದೇಶಿ,

ಯಾವುದೇ ಪರವಾನಿಗೆ ಪಡೆಯದೇ ವಿದೇಶಿಯ ಸಿಗರೇಟ್‌ಗಳನ್ನು ಹಾಗೂ ಹುಕ್ಕಾ ಸೇವನೆ ಮಾಡಲು ಬಳಸುವ ಸಾಧನಗಳನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಾರೆ. ಇದನ್ನು ಸಾರ್ವಜನಿಕರಿಗೆ, ಯುವಕರ-ಯುವತಿಯರಿಗೆ ಸರಬರಾಜು ಹಾಗೂ ಮಾರಾಟ ಮಾಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದಿತ್ತು.

ಇದರನ್ವಯ ಬರ್ಕೆ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಮೋಹನ್ ಕೊಟ್ಟಾರಿಯವರು, ಪಿ.ಎಸ್‌.ಐ ಮತ್ತು ಸಿಬ್ಬಂದಿಗಳೊಂದಿಗೆ ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.

Related posts

Leave a Comment