Mangalore and Udupi news
Blog

ಜಿಲ್ಲೆಯಲ್ಲಿ ಗಾಂಜಾ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌

ಉಡುಪಿ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಗಾಂಜಾ ಸೇವನೆ ಪ್ರಕರಣಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿರುತ್ತದೆ. ಇದರಲ್ಲಿ ಒಟ್ಟು 35 ಅಪರಾಧಿಗಳ ವಿರುಧ್ದ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.
ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದ್ದು, 7 ಆರೋಪಿತರುಗಳು, ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿದ್ದು, 6 ಆರೋಪಿತರುಗಳು, ಕಾರ್ಕಳ ನಗರ ಮತ್ತು ಮಲ್ಪೆ ಪೊಲೀಸ್‌ ಠಾಣೆಗಳಲ್ಲಿ ತಲಾ 5 ಪ್ರಕರಣ ದಾಖಲಾಗಿದ್ದು, ತಲಾ 5 ಆರೋಪಿತರುಗಳು, ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದು, 4 ಆರೋಪಿತರುಗಳು, ಕಾಪು ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ತಲಾ 2 ಪ್ರಕರಣ ದಾಖಲಾಗಿದ್ದು, ತಲಾ 2 ಆರೋಪಿತರುಗಳು, ಹಿರಿಯಡಕ, ಕೊಲ್ಲೂರು, ಕೋಟ ಮತ್ತು ಶಿರ್ವಾ ಪೊಲೀಸ್‌ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿದ್ದು, ಒಟ್ಟು 4 ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಲಾಗಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಗಾಂಜಾ ಸೇವನೆ ಮತ್ತು ಸರಭರಾಜು ಪ್ರಕರಣಗಳ ವಿರುದ್ದ ಕಟ್ಟುನಿಟ್ಟಿನ ಕ್ರಮವನ್ನು ನಿರಂತರ ಜರುಗಿಸಲಾಗುವುದು ಎಂದರು.
ವಶಕ್ಕೆ ಪಡೆದ ಗಾಂಜಾ ನಾಶ
ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 9 ಕೆಜಿ 937 ಗ್ರಾಂ 209 ಮಿಲಿಗ್ರಾಂ ತೂಕದ ಅಂದಾಜು ರೂ. 7,12,963 ಮೌಲ್ಯದ ಗಾಂಜಾ, 8,08,464 ಮೌಲ್ಯದ 345 ಗ್ರಾಂ ಎಂ.ಡಿ.ಎಂ.ಎ. ಹಾಗೂ ಮೌಲ್ಯರಹಿತ 61 ಗ್ರಾಂ 430 ಮಿಲಿಗ್ರಾಂ ಬಿಳಿ ಪೌಡರ್‌ ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್‌ ಎನ್‌ವಿರೋಟೆಕ್‌ ಪ್ರೈ. ಲಿ ಎಂಬಲ್ಲಿ ನಾಶಪಡಿಸಲಾಯಿತು.

ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಸಹಾಯಕ ಪೊಲೀಸ್‌ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ, ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರು ಹಾಗೂ ಸದಸ್ಯರಾದ ಪ್ರಭು ಡಿ.ಟಿ. ಅಧಿಕಾರಿಯವರು ಉಪಸ್ಥಿತರಿದ್ದರು.
ಉಡುಪಿ ನಗರ ಠಾಣೆಯ 3 ಪ್ರಕರಣ, ಸೆನ್‌ ಠಾಣೆಯ 2 ಪ್ರಕರಣ ಹಾಗೂ ಮಲ್ಪೆ, ಪಡುಬಿದ್ರಿ, ಶಿರ್ವಾ, ಕಾರ್ಕಳ ನಗರ ಹಾಗೂ ಮಣಿಪಾಲ ಠಾಣೆಯ ತಲಾ 1 ಪ್ರಕರಣ ಸೇರಿ ಒಟ್ಟು 10 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯ ಪದಾರ್ಥವನ್ನು ಮಾನ್ಯ ನ್ಯಾಯಾಲಯದ ಆದೇಶಾನುಸಾರ ನಾಶಗೊಳಿಸಲಾಗಿದೆ.

Related posts

Leave a Comment