ಸುಧೀರ್ ಸೋನು ಕಾಪು ಅವರ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ಸೇವಾ ಧರ್ಮ ಟ್ರಸ್ಡ್ ರಿ.ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ದಿನಾಂಕ 25/10/2025 ಶನಿವಾರ ರಕ್ತಕೇಂದ್ರ ಕೆಎಂಸಿ ಮಣಿಪಾಲದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀ ಸಾಯಿ ಈಶ್ವರ್ ಗುರೂಜೀ ಅವರು ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು ವಿದ್ಯಾದಾನ, ಅನ್ನದಾನದಂತೆ ರಕ್ತದಾನವು ಕೂಡ ಅತ್ಯಂತ ಪವಿತ್ರ ದಾನ, ಅನ್ನವಿಲ್ಲದೆ ಮನುಷ್ಯ ಬದುಕಬಹುದು ಆದರೆ ಸೂಕ್ತ ಸಂದರ್ಭದಲ್ಲಿ ರೋಗಿಗೆ ರಕ್ತದ ಪೂರೈಕೆ ಆಗದಿದ್ದರೆ ರೋಗಿ ಬದುಕುವುದು ಕಷ್ಟ. ಶ್ರೀ ಸುಧೀರ್ ಸೋನು ಅವರು ತನ್ನ ಹುಟ್ಟುಹಬ್ಬದ ದಿನದಂದು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಹಲವಾರು ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಪುನರ್ಜನ್ಮ ನೀಡಿದ್ದಾರೆ. ಇಂತಹ ಪವಿತ್ರ ಕಾರ್ಯ ಅವರಿಂದ ನಿರಂತರ ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂತೋಷ್ ಶೆಟ್ಟಿ ತೆಂಕರಗುತ್ತು, ಕಾಂಗ್ರೆಸ್ ಮುಖಂಡ ದೀಪಕ್ ಕೋಟ್ಯಾನ್, ಅಭಯಹಸ್ತ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಇದರ ಮುಖ್ಯಸ್ಥ ಡಾ. ಗಣೇಶ್ ಮೋಹನ್, ವಿಶ್ವನಾಥ್ ಶೆಟ್ಟಿ ಕೊರಂಗ್ರಪಾಡಿ, ಜಾನ್ಸನ್ ಮಣಿಪಾಲ, ಗ್ರೇಟಾ ಮಣಿಪಾಲ ಹಾಗೂ ರಕ್ತದಾನ ಶಿಬಿರದ ರೂವಾರಿಗಳಾದ ಸ್ಮಿತಾ ಸುಧೀರ್ ಹಾಗೂ ಸುಧೀರ್ ಸೋನು ಕಾಪು ಉಪಸ್ಥಿತರಿದ್ದರು.

