Mangalore and Udupi news
Blog

ಮುಳ್ಳಿಕಟ್ಟೆ: ರಸ್ತೆಗೆ ಚಾಚಿದ ಮರ ಗಿಡಗಳು ಅಪಘಾತ ತಪ್ಪಿಸಲು ತೆರವು ಕಾರ್ಯಾಚರಣೆ : ಮೇಘರಾಜ್ ಮಂಕಿ ಮತ್ತು ಸ್ನೇಹಿತರು…!!

ಕುಂದಾಪುರ: ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಮುಳ್ಳಿಕಟ್ಟೆ ನಾಯಕವಾಡಿ ಗಂಗೊಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಚಾಚಿದ ಮರ ಗಿಡಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಮತ್ತು ಅಪಘಾತ ಕ್ಕೆ ಇದು ಎಡೆ ಮಾಡಿಕೊಡುತ್ತಿದೆ ಎಂಬುದನ್ನು ಮನಗಂಡು ಸ್ಥಳೀಯ ಮಂಕಿ ನಿವಾಸಿ ಮೇಘರಾಜ್ ಯಾನೆ (ಮುನ್ನ) ಎಂಬ ಯುವಕ ಗೇರು ಅಭಿವೃದ್ಧಿ ನಿಗಮದ ಅಧಿಕಾರಿಗಳ ಗಮನಕ್ಕೆ ತಂದು ಈ ರೀತಿಯ ಅಪಾಯಕಾರಿ ಮರ ಗಿಡಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ತಮ್ಮ ಸ್ನೇಹಿತರ ಸಹಕಾರದೊಂದಿಗೆ ಮಾಡಿದರು.

ಈ ಸಮಾಜ ಮುಖಿ ಕಾರ್ಯದಲ್ಲಿ ಮೇಘರಾಜ್ ಇವರ ಜೊತೆಗೆ ಕೈ ಜೋಡಿಸಿದ ಅಂಬೇಡ್ಕರ್ ಸೇನೆ ರಿ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ಮತ್ತು ಸವೀನ್ ಬಾವಿಕಟ್ಟೆ ಹಾಗೂ ಪಬ್ಲಿಕ್ ನೆಕ್ಸ್ಟ್ ವರದಿಗಾರರಾದ ದಾಮೋದರ ಮೊಗವೀರ ರವರು ಅಪಘಾತವನ್ನು ತಪ್ಪಿಸುವ ದೃಷ್ಟಿಯಿಂದ ಜನಪರ ಕಾಳಜಿಯೊಂದಿಗೆ ಮರ ಗಿಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ
ಮಾಡಿಕೊಟ್ಟು ಕಾರ್ಯಚರಣೆ ಯಶಸ್ವಿಗೊಳಿಸಿದರು

ಇವರ ಈ ಜನಪರ ಕಾಳಜಿಯ ಮಹತ್ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related posts

Leave a Comment