Mangalore and Udupi news
Blog

ಕೌಟುಂಬಿಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆಯನ್ನು ವೃತ್ತಿ ಕೌಶಲ್ಯದ ಜೊತೆಗೆ ನಿರ್ವಹಿಸುವ ಸಂಸ್ಥೆ ಕಾರ್ಕಳದಲ್ಲಿ ಆರಂಭವಾಗಿದೆ

ಶಕ್ತಿ ಇವೆಂಟ್ಸ್ ಎಂಬ ಸಂಸ್ಥೆಯ ಶುಭಾರಂಭವು ನಿನ್ನೆ ನಗರದ ಕಟೀಲ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆಯಿತು.
ಖ್ಯಾತ ಉದ್ಯಮಿಗಳಾದ ಗಿರೀಶ್ ಶೆಟ್ಟಿ ಕುಡ್ಪುಲಾಜೆ, ಬೋಳ ಶ್ರೀನಿವಾಸ್ ಕಾಮತ್, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು ಮತ್ತು ಉದ್ಯಮಿಗಳಾದ ನಿತ್ಯಾನಂದ ಪೈ ಅವರು ಈ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಿರೀಶ್ ಶೆಟ್ಟಿ, ಕುಡುಪುಲಾಜೆ ಅವರು ಯುವಕರಲ್ಲಿ ಉದ್ಯೋಗಾಸಕ್ತಿಗಿಂತ ಹೆಚ್ಚು ಉದ್ಯಮಶೀಲತೆಯನ್ನು ಬೆಳೆಸಬೇಕು ಸಾಮಾಜಿಕ ಜೀವನದ ಜೊತೆ ಜೊತೆಗೆ ಆರ್ಥಿಕ ಸ್ವಾವಲಂಬನೆಯ ಕಡೆಗೆ ಕೂಡ ಯುವಕರು ಗಮನ ಹರಿಸಬೇಕು ಹೆಚ್ಚಿನ ಇವೆಂಟ್ ಕಂಪನಿಗಳು ಬೆಂಗಳೂರು ಮತ್ತು ಮಂಗಳೂರು ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು ಕಾರ್ಕಳದಲ್ಲಿ ಈ ಸಂಸ್ಥೆ ಆರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಸಂಸ್ಥೆಯ ಪಾಲುದಾರರಾಗಿರುವ ಗುರುಪ್ರಸಾದ್ ನಾರಾವಿ ಶ್ರೀಕಾಂತ್ ಶೆಟ್ಟಿ ಮತ್ತು ಸಂತೋಷ್ ಅವರು ಅತಿಥಿಗಳನ್ನು ಸ್ವಾಗತಿಸಿದರು.

Related posts

Leave a Comment