Mangalore and Udupi news
Blog

ಉಡುಪಿ : ಮನೆಯಲ್ಲೇ ಯುವ ಪ್ರೇಮಿಗಳು ನೇಣಿಗೆ ಶರಣು…!!

ಉಡುಪಿ : ನಗರದ ಸಮೀಪ ಯುವಪ್ರೇಮಿಗಳಿಬ್ಬರು ಮನೆಯ ಜಂತಿಗೆ ಚೂಡಿದಾರದ ವೇಲಿನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಅಂಬಲಪಾಡಿ ಕಾಳಿಕಾಂಬ ನಗರದ ಲೇಬರ್ ಕಾಲೋನಿ ಎಂಬಲ್ಲಿ ಯುವತಿ ವಾಸವಾಗಿರುವ ಬಾಡಿಗೆ ಜೋಪಡಿಯಲ್ಲಿ ಯಾರೂ ಇಲ್ಲದ ಸಮಯನೋಡಿ ಇರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ.

ಮೃತ ಯುವತಿ ವಲಸೆ ಕಾರ್ಮಿಕ ಕುಟುಂಬದ ಕಾಲೇಜು ವಿದ್ಯಾರ್ಥಿನಿ ಪವಿತ್ರ (17ವ), ಯುವಕ ವಲಸೆ ಕಾರ್ಮಿಕ ಮಲ್ಲೇಶ (23ವ) ಎಂದು ತಿಳಿಯಲಾಗಿದೆ.

ನಗರ ಪೋಲಿಸ್ ಠಾಣೆಯ‌ ಎಸ್.ಐ ಭರತೇಶ್, ಎ.ಎಸ್.ಐ ಪರಮೇಶ್ವರ್ ಕೆ, ಎ.ಎಸ್ ಐ ರಮೇಶ್, ಮುಖ್ಯ ಆರಕ್ಷಕ ಜಯಕರ್, ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು, ಎರಡು ಶವಗಳನ್ನು ಪೋಲಿಸರ ಸಮಕ್ಷಮದಲ್ಲಿ ನೇಣುಕುಣಿಕೆಯಿಂದ ತೆರವುಗೊಳಿಸಿ, ಬಳಿಕ ಅಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ಇಲಾಖೆಗೆ ನೆರವು ನೀಡಿದರು.

Related posts

Leave a Comment