Mangalore and Udupi news
Blog

ಉಡುಪಿ : ವ್ಯಕ್ತಿಯೋರ್ವರಿಗೆ ಇನ್ವೆಸ್ಟ್ ಮೆಂಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ…!!

ಉಡುಪಿ: ನಗರದ ವ್ಯಕ್ತಿಯೋರ್ವರಿಗೆ ಆಪ್ಲೈನ್ ಮೂಲಕ ಅಪರಿಚಿತ ನಂಬರಿನಿಂದ ಮೆಸೇಜ್ ಬಂದಿದ್ದು ಅದರಲ್ಲಿ ಇನ್ವೆಸ್ಟ್ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ತಿಳಿಸಿ ಒಂದು ಲಿಂಕ್ ಕಳುಹಿಸಿ ಲಕ್ಷಾಂತರ ರೂಪಾಯಿ ವಂಚನೆಯಾದ ಘಟನೆ ಸಂಭವಿಸಿದೆ.

ವಂಚನೆಗೊಳಾಗದವರು ಸುಮಂತ್ ಕುಮಾರ್ ಎಂದು ತಿಳಿಯಲಾಗಿದೆ.

ಉಡುಪಿಯ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಸುಮಂತ್ ಕುಮಾರ್ (27) ಇವರು 2025 ಜುಲೈ ತಿಂಗಳಿನಲ್ಲಿ ಆಪ್ಲೈನ್ ಮೂಲಕ ಅಪರಿಚಿತ ನಂಬರಿನಿಂದ ಮೆಸೇಜ್ ಬಂದಿದ್ದು ಅದರಲ್ಲಿ ಇನ್ವೆಸ್ಟ್ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ತಿಳಿಸಿ ಒಂದು ಲಿಂಕ್ ಕಳುಹಿಸಲಾಗಿದ್ದು, ಆ ಲಿಂಕನ್ನು ತೆರೆದಾಗ ಅದು F4-ರಿಲಯನ್ಸ್ ಮೋಷನ್ ಗ್ರೂಪಿಗೆ ಇನ್ವೈಟ್ ಮಾಡಿದ್ದು ಗ್ರೂಪಿಗೆ ಸೇರ್ಪಡೆಗೊಂಡಿರುತ್ತಾರೆ. ಆ ಗ್ರೂಪಿನಲ್ಲಿ ಇನ್ವೆಸ್ಟ್ ಮೆಂಟ್ ಬಗ್ಗೆ ಚರ್ಚೆ ನಡೆಸುತ್ತಿದ್ದು, ಅದರಲ್ಲಿ 2025 ರ ಜುಲೈ 03 ರಂದು ಅಂಜಲಿ ಮೆಹ್ತಾ ಹಾಗೂ ಶ್ರೀಧರ್ ರಂಗರಾಜನ್ ಎಂದು ವಾಟ್ಯಾಪ್ ನಲ್ಲಿ ಪರಿಚಯಿಸಿಕೊಂಡು ವಿಶೇಷ ಆಫರ್ಸ್ ಇದ್ದು ಈ ದಿನ ಪ್ರೈಮರಿ Market Trading Account ತೆರೆಯುವಂತೆ ತಿಳಿಸಿದಂತೆ ಪ್ರೈಮರಿ Market Trading Account ಖಾತೆಯನ್ನು ತೆರೆದಿದ್ದು, ಅದರಲ್ಲಿ ಅವರು ತಿಳಿಸಿದಂತೆ ಅವರು ನೀಡಿದ ವಿವಿಧ ಖಾತೆಗಳಿಗೆ ಕೋಟಾಕ್ ಮಹಿಂದ್ರ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ತಾಯಿಯವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 16,99,605/- ಹಣವನ್ನು ವರ್ಗಾವಣೆ ಮಾಡಿದ್ದು, ಆದರೆ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲೀ ನೀಡದೇ ಪಿರ್ಯಾದಿದಾರರಿಗೆ ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2025, ಕಲಂ: 66 (C), 66(D) IT Act ಮತ್ತು ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment