Mangalore and Udupi news
Blog

ಹೆಂಡತಿಗೆ ಕತ್ತಿಯಿಂದ ಹಲ್ಲೆ ಮಾಡಿ ಗಂಡ ಆತ್ಮಹತ್ಯೆ

ಕಾರ್ಕಳ : ಹೆಂಡತಿಗೆ ಕತ್ತಿಯಿಂದ ಹಲ್ಲೆ ಮಾಡಿ ಗಂಡ ನೇಣು
ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 15ರಂದು ಹಿರ್ಗಾನದಲ್ಲಿ ನಡೆದಿದೆ. ಸುರೇಖಾ ಅವರ ಗಂಡ ಗೋಪಾಲಕೃಷ್ಣ (60) ಜು. 15ರಂದು ಮಧ್ಯಾಹ್ನ ಹೆಂಡತಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸುರೇಖಾ ಅವರ ಮೈಯಿಂದ ರಕ್ತಬರುವುದನ್ನು ನೋಡಿ ಹೆದರಿ ಅಲ್ಲಿಂದ ಹೋದ ಗೋಪಾಲಕೃಷ್ಣ ಚಿಕ್ಕಲ್‌ಬೆಟ್ಟು ನಡಿಮತ್ತಾವು ಎಂಬಲ್ಲಿರುವ ತನ್ನ ಮನೆಯ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

Leave a Comment