ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ : ದನದ ಮಾಂಸ ಕಡಿದು ಮಾರಾಟ ಮಾಡುತ್ತಿದ್ದ ಖಚಿತ ವರ್ತಮಾನದ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕರಾದ ಸಂದೇಶ ಪಿ ಜಿ, ಕೃಷ್ಣಪ್ಪ, ಅಖಿಲ್ ಅಹಮದ್, ನಾಗರಾಜ್ ಅವರುಗಳು ಗಂಟಾಲ್ ಕಟ್ಟೆಯ ಜಲೀಲ್ ಎಂಬವರ ಮನೆಯ ಹಿಂಭಾಗದ ಗುಡ್ಡೆಯಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಧಾಳಿ ಮಾಡಿದರು. ಪೊಲೀಸರ ಧಾಳಿಗೆ ದಿಕ್ಕಾ ಪಾಲಾಗಿ ಓಡಿದ ಆರೋಪಿಗಳಾದ ಜಲೀಲ್ ಕಲ್ಲಬೆಟ್ಟು, ಸಾಹಿಲ್, ಸೊಹೇಲ್, ಕುದ್ರೋಳಿ ನಿವಾಸಿ ಮಹಮ್ಮದ್ ಅಶ್ರಫ್ ಅವರುಗಳನ್ನು ಗುರುತಿಸಿದ್ದು ಸದ್ಯದಲ್ಲಿಯೇ ಬಂಧಿಸಲಾಗುವುದು.
ಸ್ಥಳದಲ್ಲಿ ಇದ್ದ ಮಾಂಸ ಪಡೆಯಲು ಬಂದಿದ್ದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಗಳ ವಿರುದ್ಧ ಗೋ ಹತ್ಯೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿಯುತ್ತಿದೆ ಎಂದು ಪೊಲೀಸ್ ನಿರೀಕ್ಷಕ ಸಂದೇಶ ಪಿ ಜಿ ತಿಳಿಸಿರುತ್ತಾರೆ.