ಶಿರ್ವಾ: ಉಡುಪಿ ಜಿಲ್ಲೆಯ ಶಿರ್ವಾ ಸಮೀಪ ಸಾರ್ವಜನಿಕ ರಸ್ತೆಯ ಬಳಿ ಬೀದಿ ದೀಪದ ಕೆಳಗೆ ನೆಲದಲ್ಲಿ ಕುಳಿತು ಹಣವನ್ನು ಪಣವಾಗಿ ಇಡುತ್ತಾ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು 1) ನಿಂಗಪ್ಪ ಗಡ್ಡದವರ (37), 2) ನಿಂಗಪ್ಪ ಅಂಬಿಗೇರ (23), 3) ರಾಘವೇಂದ್ರ ಸಣ್ಣತಂಗೇರ (28) ಎಂದು ಗುರುತಿಸಲಾಗಿದೆ.ಶಿರ್ವ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಮಂಜುನಾಥ ಮರಬದ, ಪೊಲೀಸ್ ಉಪನಿರೀಕ್ಷಕರು (ಕಾ&ಸು) ಶಿರ್ವ ಪೊಲೀಸ್ ಠಾಣೆ ಇವರು ದಿನಾಂಕ 09/11/2025 ರಂದು ಠಾಣಾ ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಾತ್ರಿ 11:30 ಗಂಟೆಗೆ ಕಾಪು ತಾಲೂಕು ಶಿರ್ವ ಗ್ರಾಮದ ಇರ್ಮಿಂಜ ಚರ್ಚ್ ಸಮೀಪ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಬಳಿ ಬೀದಿ ದೀಪದ ಕೆಳಗೆ ನೆಲದಲ್ಲಿ ಕುಳಿತು ಹಣವನ್ನು ಪಣವಾಗಿ ಇಡುತ್ತಾ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ನಿಂಗಪ್ಪ ಗಡ್ಡದವರ (37), 2) ನಿಂಗಪ್ಪ ಅಂಬಿಗೇರ (23), 3) ರಾಘವೇಂದ್ರ ಸಣ್ಣತಂಗೇರ (28) ಏಂಬವರಿಂದ ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳು – 52, ನಗದು ರೂ. 1,900/- ಒಂದು ಹಳೆಯ ದಿನ ಪತ್ರಿಕೆ ಯನ್ನು ಸ್ವಾಧೀನಪಡಿಸಿ ಕೊಂಡಿದ್ದಾಗಿರುತ್ತದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಎನ್ ನಂಬ್ರ 76/2025 ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಶಿರ್ವ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 78/2025 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

