Mangalore and Udupi news
Blog

ಪುತ್ತಿಗೆ: ಸಿಡಿಲು ಬಡಿದು ಮನೆಗೆ ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚೆಬೈಲು ಕುಂಗೂರು ಎಂಬಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಮನೆಯೊಂದಕ್ಕೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಕಂಚಿಬೈಲು ಕುಂಗೂರು ನಿವಾಸಿ ವಾಸು ಮುಗೇರ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯೊಳಗಿನ ವಿದ್ಯುತ್ ಉಪಕರಣಗಳು ಸೇರಿದಂತೆ ಇತರೆ ಸೊತ್ತುಗಳು ಸಿಡಿಲಾಘಾತದಿಂದ ಸಂಪೂರ್ಣವಾಗಿ ಹಾಳಾಗಿವೆ. ಘಟನೆಯಿಂದಾಗಿ ಮನೆಯ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದಯಾನಂದ ಕೊಡ್ಯಡ್ಕ ಹಾಗೂ ಪಂಚಾಯಿತಿ ಸದಸ್ಯೆ ಸುಮಾ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ವರದಿ :ಜಗದೀಶ ಪೂಜಾರಿ ಕಡಂದಲೆ

Related posts

Leave a Comment